ಬಂಗಾರು ತಿರುಪತಿಯ ವೆಂಕಟರಮಣಸ್ವಾಮಿ ದೇವಾಲಯ ಆವರಣದಲ್ಲಿರುವ ಗುಡಿ ಗೋಪುರಗಳಿಗೆ ಬಣ್ಣ ಸೇರಿ ಕೋಟ್ಯಂತರ ರೂ. ವೆಚ್ಚದಲ್ಲಿ ಜೀಣೋರ್ದ್ಧಾರ ಕಾರ್ಯಕ್ಕೆ ಇತ್ತೀಚೆಗೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅಶೋಕ್​ಕೃಷ್ಣಪ್ಪ, ಆಡಳಿತ ಮಂಡಳಿ ಹಾಗೂ ಭಕ್ತರ ಸಮ್ಮುಖದಲ್ಲಿ ಹಲವು ಹೋಮ ಹವನಗಳನ್ನು ನೆರವೇರಿಸಿ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು. 
ಜಿಲ್ಲೆ

ಅಭಿವೃದ್ಧಿಯತ್ತ ಬಂಗಾರು ತಿರುಪತಿ ದೇಗುಲ

ಕೊಟ್ಯಂತರ ರೂ.ವೆಚ್ಚದಲ್ಲಿ ಜೀಣೋರ್ದ್ಧಾರ - ಮೂಲ ಸೌಕರ್ಯಗಳಿಗೂ ಒತ್ತು

ಬೇತಮಂಗಲ: ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಬಂಗಾರು ತಿರುಪತಿಯ ವೆಂಕಟರಮಣಸ್ವಾಮಿ ದೇವಾಲಯ ಆವರಣದಲ್ಲಿರುವ ಗುಡಿ ಗೋಪುರಗಳಿಗೆ ಬಣ್ಣ ಸೇರಿ ಕೋಟ್ಯಂತರ ರೂ. ವೆಚ್ಚದಲ್ಲಿ ಜೀಣೋರ್ದ್ಧಾರ ಕಾರ್ಯಕ್ಕೆ ಇತ್ತೀಚೆಗೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅಶೋಕ್​ಕೃಷ್ಣಪ್ಪ, ಆಡಳಿತ ಮಂಡಳಿ ಹಾಗೂ ಭಕ್ತರ ಸಮ್ಮುಖದಲ್ಲಿ ಹಲವು ಹೋಮ ಹವನಗಳನ್ನು ನೆರವೇರಿಸಿ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.

ರಾಜ್ಯ ಪ್ರವಾಸೋದ್ಯಮ ಹಾಗೂ ಮುಜರಾಯಿ ಇಲಾಖೆಗಳ ಅಂಕಿ ಅಂಶಗಳು ಹಾಗೂ ಸ್ಥಳ ಪುರಾಣ ನೀಡುವ ಮಾಹಿತಿಯಂತೆ ಅತ್ಯಂತ ಪುರಾತನ, ಪುರಾಣ ಪ್ರಸಿದ್ಧ ಮತ್ತು ಲಕ್ಷಾಂತರ ಭಕ್ತರ ಆರಾಧ್ಯ ದೈವ ಎನಿಸಿರುವ ವೆಂಕಟರಮಣಸ್ವಾಮಿ ದೇವಾಲಯವು ಕೋಲಾರ ಜಿಲ್ಲೆಯ ಪ್ರಥಮ ಶ್ರೇಣಿ ದೇವಾಲಯಗಳ ಪೈಕಿ ಮುಂಚೂಣಿಯಲ್ಲಿದೆ ಹಾಗೂ ವಾರ್ಷಿಕ ಕೋಟ್ಯಂತರ ರೂ. ಆದಾಯ ಹೊಂದಿರುವ ದೇವಾಲಯವಾಗಿದೆ.

ಮಹಾವಿಷ್ಣು ಶಾಪದಿಂದ ಮುಕ್ತರಾಗಲು ಭೃಗು ಮಹರ್ಷಿಯು ತನ್ನ ಆಶ್ರಮದಲ್ಲಿ ತಪಸ್ಸು ಮಾಡುತ್ತಿದ್ದ ಕಾಲದಲ್ಲಿ ವಿಷ್ಣುವೆಂಕಟರಮಣನ ರೂಪದಲ್ಲಿ ಬಂದು ಶಾಪಮುಕ್ತಗೊಳಿಸಿದನಲ್ಲದೆ, ಮನುಷ್ಯನಲ್ಲಿರುವ ಷಡ್ವರ್ಗಗಳನ್ನು ಮುಕ್ತಗೊಳಿಸುವ ಪವಿತ್ರ ಸ್ಥಳ ಎಂಬ ಪ್ರತಿತಿ ಇದೆ.ಈ ಭಾಗದ ರಾಜಕಾರಣಿಯಾಗಿದ್ದ ದಿ.ಎಂ.ವಿ.ಕೃಷ್ಣಪ್ಪ ಮತ್ತುಶಾಸಕರಾಗಿದ್ದ ದಿ.ದೊರೆಸ್ವಾಮಿ ನಾಯ್ಡು ಅವರ ಅಧಿಕಾರವಧಿಯಲ್ಲಿ ದೇವಾಲಯ ನವೀಕರಣಗೊಳಿಸಲಾಗಿತ್ತು. ನಂತರ 1982ರಲ್ಲಿ ಮುಜರಾಯಿ ಇಲಾಖೆಯಿಂದ ಮತ್ತೊಮ್ಮೆ ಕೆಲ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದನ್ನು ಬಿಟ್ಟರೆ, ಯಾವುದೇ ಪ್ರಗತಿಗೆ ಕೈ ಹಾಕಿರಲಿಲ್ಲ. ಪ್ರವಾಸಿಗರಿಗಾಗಿ ಸಣ್ಣ ಪುಟ್ಟ ಮೂಲ ಸೌಲಭ್ಯ ಕಲ್ಪಿಸಿದ್ದನ್ನು ಬಿಟ್ಟರೆ ದೊಡ್ಡ ಮಟ್ಟದ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗಿರಲಿಲ್ಲ, ಈಗ ಕೋಟ್ಯಂತರ ರೂ. ವೆಚ್ಚದಲ್ಲಿ ನವೀಕರಣ ಕಾರ್ಯ ಕೈಗೊಂಡಿದ್ದು, ಬಹು ದಿನಗಳ ಬೇಡಿಕೆ ಈಡೇರಿದಂತಾಗಿದೆ.

ಕೂಡಿಬಂದ ಯೋಗ

ದೇವಾಲಯ ಅಭಿವೃದ್ಧಿಪಡಿಸುವಲ್ಲಿ ಸಾಕಷ್ಟುಆಸಕ್ತಿವಹಿಸಿದ್ದ ಮಾಜಿ ಮಂತ್ರಿ ದಿ.ಎಂ.ವಿ.ಕೃಷ್ಣಪ್ಪ ಅವರ ಪುತ್ರಅಶೋಕ ಕೃಷ್ಣಪ್ಪ ಅವರು ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ನಂತರ ದೇವಾಲಯದ ಸಂಪೂರ್ಣ ಅಭಿವೃದ್ಧಿಗಾಗಿ 20 ವರ್ಷಗಳಿಂದಲೂ ಪ್ರಯತ್ನ ನಡೆಸಿದ್ದರು. ಆದರೆ, ಮುಜರಾಯಿ ಇಲಾಖೆಯ ಹಿರಿಯ ಅಧಿಕಾರಿಗಳ ರ್ನಿಲಕ್ಷ$್ಯ ಮತ್ತು ಬೇಜವಾಬ್ದಾರಿಯಿಂದ ಹಿನ್ನಡೆ ಆಗಿತ್ತು. ಅಂತೂ ಈಗ ಯೋಗ ಕೂಡಿಬಂದಿದೆ.

ಗೋಪುರಗಳಿಗೆ ಮರುಜೀವ

ದೇವಾಲಯದ ಸುಮಾರು 60 ಎಕರೆ ಆಸ್ತಿಯ ಪೈಕಿ ಸುಮಾರು ಹತ್ತು ಎಕರೆ ವಿಸ್ತೀರ್ಣದಲ್ಲಿನ ಮುಖ್ಯದ್ವಾರದ ಬೃಹತ್​ ಗೋಪುರ ಸೇರಿ ಒಳ ಆವರಣದಲ್ಲಿರುವ ನಾಲ್ಕು ಗೋಪುರಗಳು ಸುಣ್ಣ&ಬಣ್ಣ ನೋಡಿ ದಶಕಗಳೇ ಕಳೆದಿವೆ. ಇದೀಗ ಆವರಣದಲ್ಲಿನ ನಾಲ್ಕು ಗೋಪುರಗಳು, ವೆಂಕಟರಮಣ ಸ್ವಾಮಿ ಗರ್ಭ ಗುಡಿ, ಮತ್ತೊಂದು ಬೆಟ್ಟದ ತುದಿಯಲ್ಲಿರುವ ಪದ್ಮಾವತಿ ಅಮ್ಮನವರ ಗರ್ಭಗುಡಿ, ವರಹಸ್ವಾಮಿ ದೇವಾಲಯ, ಪುಷ್ಕರಣಿ, ಪಾಪನಾಶನಮ್​,ಗರುಡ ದ್ವಾರ ಮತ್ತು ಆವರಣದಲ್ಲಿನ ಎಲ್ಲ ಪ್ರೇಕ್ಷಣಿಯ ಸ್ಥಳಗಳ ನವೀಕರಣ, 24 ಗಂಟೆಗಳ ಕಾಲ ಎಲ್ಲೆಡೆ ಬೆಳಕಿನ ವ್ಯವಸ್ಥೆ, ಕುಡಿಯುವ ನೀರಿನ ಯೋಜನೆ ಸೇರಿ ದೇವಾಲಯಕ್ಕೆ ಸಂಬಂಧಪಟ್ಟ ಎಲ್ಲ ಸಮಸ್ಯೆಗಳಿಗೂ ಪರಿಹಾರ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ.

ಸುಮಾರು 10 ವರ್ಷಗಳಿಂದ ಗೋಪುರಗಳಿಗೆ ಬಣ್ಣ ಹೊಡೆಸುವುದು ಸೇರಿ ಪೂರ್ಣವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಪ್ರಯತ್ನ ಮಾಡಿದ್ದೆವು. ಆದರೆ, ಒಂದಲ್ಲ ಒಂದು ಸಮಸ್ಯೆ ಎದುರಾಗಿ ಪ್ರಯತ್ನ ವಿಫಲವಾಗಿತ್ತು. ಈಗ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಸುಮಾರು ಎರಡು ತಿಂಗಳವರೆಗೆಕಾಮಗಾರಿಗಳು ನಡೆಯಲಿದ್ದು, ಅದುವರೆಗೂ ವೆಂಕಟೇಶ್ವರ ಮತ್ತು ಅಮ್ಮನವರ ಮೂಲವಿಗ್ರಹಗಳನ್ನು ಒಂದೇ ಕಡೆ ಪ್ರತಿಷ್ಠಾಪನೆ ಮಾಡುವ ಮೂಲಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. - ಅಶೋಕ್​ ಕೃಷ್ಣಪ್ಪ ಅಧ್ಯಕ್ಷ, ವ್ಯವಸ್ಥಾಪನ ಸಮಿತಿ, ಬಂಗಾರು ತಿರುಪತಿ ದೇವಸ್ಥಾನ ದೇವಾಲಯ ಜೀಣೋರ್ದ್ಧಾರ ಮತ್ತು ನವೀಕರಣ ಹಿನ್ನೆಲೆಯಲ್ಲಿ ವೆಂಕಟೇಶ್ವರಸ್ವಾಮಿ ಮತ್ತು ಪದ್ಮಾವತಿ ದೇವಿಯವರನ್ನು ಬಾಲಾಲಯ ಕುಂಭವಾಹನದಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡಿ,ಆವರಣದಲ್ಲಿರುವ ಅಲಂಕಾರ ಮಂಟಪದಲ್ಲಿ ಸ್ಥಾಪನೆ ಮಾಡಲಾಗಿದ್ದು, ಭಕ್ತರಿಗೆ ಬೆಟ್ಟದ ಮೇಲೆ ಹೋಗಲು ಅವಕಾಶ ಇಲ್ಲದ ಕಾರಣಕ್ಕೆ ಇಲ್ಲಿಯೇ ದರ್ಶನದ ವ್ಯವಸ್ಥೆ ಮಾಡಲಾಗಿದೆ, ಸುಮಾರು ಹತ್ತಕ್ಕೂ ಹೆಚ್ಚು ಆಗಮಿಕರು ಹಾಗೂ ಪುರೋಹಿತರ ನೇತೃತ್ವದಲ್ಲಿ ಎಲ್ಲ ರೀತಿಯ ಹೋಮ&ಹವನ ಪೂಜೆಗಳನ್ನು ಮಾಡಿದ ನಂತರ ಭಾನುವಾರ ರಾತ್ರಿ ಬಾಲಾಲಯ ಕುಂಭವಾಹನ ಮಹಾಮಂಗಳಾರತಿಯೊಂದಿಗೆ ಸಂಪನ್ನ ಮಾಡಲಾಗಿದೆ. -ಅನಂತ ಆಚಾರಿ ದೇವಾಲಯ ಹಿರಿಯ ಆಗಮಿಕರು, ಬಂಗಾರು ತಿರುಪತಿ ದೇವಾಲಯ