ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸಾರ್ವಜನಿಕ ಜೀವನದಲ್ಲಿ ಮಾದರಿಯಾಗಿ ಬದುಕಿದ್ದವರು ಎಂದು ಸಂಸದ ಗೋವಿಂದ ಎಂ. ಕಾರಜೋಳ ಸಂತಾಪ ಸೂಚಿಸಿದ್ದಾರೆ. ಕೃಷ್ಣ ಅವರ ನಿಧನದಿಂದ ನಾವಿಂದು ಅಭಿವೃದ್ಧಿಯ ರಾಯಬಾರಿಯನ್ನು ಕಳೆದುಕೊಂಡಂತಾಗಿದೆ. ಬೆಂಗಳೂರಿನ ಅಂತಾರಾಷ್ಟ್ರೀಯ ಖ್ಯಾತಿಗೆ ಕೃಷ್ಣರ ದೂರದೃಷ್ಟಿ ಕಾರಣ.
ದೊರೆತ ಹುದ್ದೆಗಳಿಗೆ ಗೌರವ ದೊರಕಿಸಿಕೊಟ್ಟು, ತಾವೂ ಬೆಳೆದು, ಇತರರನ್ನೂ ಬೆಳೆಸಿದ ಕೀರ್ತಿ ಮಹಾನ್ ನಾಯಕ ಕೃಷ್ಣ ಅವರಿಗೆ ಸಲ್ಲುತ್ತದೆ. ಭಗವಂತ ಅವರ ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ಅಗಲಿಕೆ ದುಃಖ ಭರಿಸುವ ಶಕ್ತಿ ಕರುಣಿಸಲೆಂದು ಸಂಸದರು ಪ್ರಾರ್ಥಿಸಿದ್ದಾರೆ.