filter: 0; fileterIntensity: 0.0; filterMask: 0; captureOrientation: 0; module: photo; hw-remosaic: false; touch: (-1.0, -1.0); modeInfo: ; sceneMode: 2; cct_value: 5882; AI_Scene: (-1, -1); aec_lux: 117.0; aec_lux_index: 0; hist255: 0.0; hist252~255: 0.0; hist0~15: 0.0; albedo: ; confidence: ; motionLevel: 0; weatherinfo: null; temperature: 41; 
ಜಿಲ್ಲೆ

ಅಭಿವೃದ್ಧಿಗೆ ಸಾಧನ ಶಿಕ್ಷಣ

ನೇಸರಗಿ: ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಿ ಬೋಧನೆ ಮಾಡಿದರೆ ಶೈಕ್ಷಣಿಕ ಪ್ರಗತಿ ಕಂಡುಕೊಳ್ಳಲು ಸಾಧ್ಯ ಎಂದು ಸ್ಥಳೀಯ ಸಿಆರ್‌ಪಿ ಸಿದ್ದನಗೌಡ ಪಾಟೀಲ ಹೇಳಿದರು.

ಸ್ಥಳೀಯ ಸರ್ಕಾರಿ ಕುವೆಂಪು ಶತಮಾನೋತ್ಸವ ಮಾದರಿ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನೇಸರಗಿ ಕ್ಲಸ್ಟರ್ 1ರಿಂದ 5ನೇ ತರಗತಿ ಮಕ್ಕಳ ಎ್ಎಲ್‌ಎನ್ ಆಧಾರಿತ ಮಕ್ಕಳ ಕಲಿಕಾ ಹಬ್ಬದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣವು ವಿದ್ಯಾರ್ಥಿಯ ಸರ್ವಾಂಗೀಣ ಅಭಿವದ್ಧಿಗೆ ಸಹಕಾರಿಯಾಗಿದ್ದು, ಹೊಸ ಚಟುವಟಿಕೆಗಳ ಮೂಲಕ ಶಿಕ್ಷಣ ನೀಡಿ ಆಸಕ್ತಿ ಮೂಡಿಸುವಂತೆ ಪ್ರೇರಣೆ ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ವಿಶೇಷ ಬೋಧನಾ ಚಟುವಟಿಕೆ ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡೆಯಬೇಕು ಎಂದರು.

ಗ್ರಾಪಂ ಅಧ್ಯಕ್ಷ ವೀರಭದ್ರ ಚೋಬಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣವು ಅಮೂಲ್ಯ ಸಂಪತ್ತು. ಅದನ್ನು ಪರಿಶ್ರಮ ವಹಿಸಿ ಸಂಪಾದಿಸಬೇಕೆಂದರು.

ವಿವಿಧ ಸ್ಪರ್ಧೆ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷೆ ಎಸ್.ಬಿ. ಸೋಮಣ್ಣವರ, ಮಹಾಂತೇಶ ರಾಯಪ್ಪಗೋಳ, ನಬಿಸಾಬ್ ಬಾಗವಾನ್, ಮುಖ್ಯಶಿಕ್ಷಕ ಎಸ್.ಬಿ. ಬೆಳಗಾವಿ, ಪ್ರಕಾಶ ದೇಶನೂರ, ಎಂ.ಎಸ್. ಯಲ್ಲಪ್ಪನವರ, ಗ್ರಾಪಂ ಸದಸ್ಯರಾದ ನಿಂಗಪ್ಪ ತಳವಾರ, ಯಮನಪ್ಪ ಪೂಜೇರಿ, ರಮೇಶ ಇಂಗಳಗಿ, ದೇಮಣ್ಣ ಗುಜನಟ್ಟಿ, ಶೋಭಾ ಗಡದವರ, ಸಂತೋಷ ಪಾಟೀಲ ಇತರರಿದ್ದರು.