ಜಿಲ್ಲೆ

ಅಭಿವೃದ್ಧಿಗೆ ಸರ್ವರ ಪ್ರಯತ್ನ ಬೇಕು

ಬಾಗಲಕೋಟೆ: ಸಮಾಜದಲ್ಲಿ ಯಾವುದೇ ಬೇಧವಿಲ್ಲದೆ ಉತ್ತಮ ಸೇವೆಯನ್ನು ಒದಗಿಸುವ ಮೂಲಕ ಅಭಿವೃದ್ಧಿ ಪಥದಲ್ಲಿ ಸಾಗಲು ಸರ್ವರು ಪ್ರಯತ್ನಿಸಬೇಕು ಎಸ್.ಆರ್.ಎನ್.ಇ ಫೌಂಡೇಶನ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್ ನವಲಿಹಿರೇಮಠ ಹೇಳಿದರು.
ಗುಡೂರ ಎಸ್.ಸಿ ಗ್ರಾಮದ ಆಲದ ಮಾರುತೇಶ್ವರ ಜೀರ್ಣೋದ್ಧಾರ ಸೇವಾ ಸಮಿತಿ ಹಾಗೂ ಎಸ್.ಆರ್. ನವಲಿಹಿರೇಂಠ ಅಭಿಮಾನಿ ಬಳಗದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆಲದ ಮಾರುತೇಶ್ವರ ೯ ನೇ ವರ್ಷದ ಕಾರ್ತಿಕೋತ್ಸವ, ಆಲದ ಮಾರುತೇಶ್ವರ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾನ ಮನಸ್ಕ ಯುವಕರು ಸೇವಾ ಸಮಿತಿ ರಚಿಸಿ ಸಮಾಜ ಸೇವೆ ಮಾಡಲು ಮುಂದಾಗಿರುವುದು ಉತ್ತಮ ಬೆಳವಣಿಗೆ. ಸಮಾಜಕ್ಕೆ ಹಲವಾರು ಕೊಡುಗೆಗಳನ್ನು ನೀಡಲಿ ಎಂದರು.
ಮಹಿಳಾ ಸಬಲೀಕರಣ ಆಗಬೇಕು. ಯುವಕರು, ಮಹಿಳೆಯರು, ನಿರುದ್ಯೋಗಿಗಳು ಮತ್ತು ಅಸಹಾಯಕರನ್ನು ಮುಂಚೂಣಿಗೆ ತರಬೇಕು. ನಮ್ಮ ಫೌಂಡೇಶನ್ ನೇತೃತ್ವದಲ್ಲಿ ಉಚಿತ ಕಣ್ಣಿನ ತಪಾಸಣೆ, ಆರೋಗ್ಯ ತಪಾಸಣೆ, ಆಹಾರ ಧಾನ್ಯ ವಿತರಣೆ, ವಸತಿ ಸೌಕರ್ಯ ಸೇರಿದಂತೆ ವಿವಿಧ ಸಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜೀರ್ಣೋದ್ಧಾರ ಸೇವಾ ಸಮಿತಿಯ ಅಧ್ಯಕ್ಷ ದುರಗಪ್ಪ ಭಜಂತ್ರಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಚಾಂದನಿ ಇಟಗಿ, ಉಪಾಧ್ಯಕ್ಷ ಹನಮಂತ ತೊಟ್ಲಪ್ಪನವರ, ಶಶಿಕಾಂತ ಭಜಂತ್ರಿ, ಫೀರಸಾಬ ವಾಲಿಕಾರ, ಶ್ರೀಶೈಲ ಶಿವಪ್ಪಯ್ಯನಮಠ, ದೊಡ್ದಬಸಯ್ಯ ಹಿರೇಮಠ, ಯುವ ಮುಖಂಡರಾದ ಪ್ರವೀಣ ಸಾರಂಗಮಠ, ರಫೀಕ ಇಟಗಿ, ವಿಜಯಶಂಕರ ಭಜಂತ್ರಿ ಸೇರಿದಂತೆ ಇತರರು ಇದ್ದರು.