ಜೊಯಿಡಾ: ಕರೊನಾದೊಂದಿಗೆ ಜತೆಗೆ ನಾವು ಬದುಕಬೇಕು. ಅಧಿಕಾರಿಗಳು ಅಭಿವೃದ್ಧಿ ಕಾರ್ಯಗಳಿಗೆ ಕೋವಿಡ್ ಕಾರಣ ಹೇಳಿ ನಿಲ್ಲಿಸುವಂತಿಲ್ಲ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಜೊಯಿಡಾದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶನಿವಾರ ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಈ ವೇಳೆ, ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲ ಎಂಬುದರ ಬಗ್ಗೆ ಗಮನಕ್ಕೆ ಬಂದಾಗ ಜಿ.ಪಂ. ಸಿಇಒ ಅವರಿಗೆ ದೂರವಾಣಿ ಕರೆ ಮಾಡಿ ಜೊಯಿಡಾ ತಾಲೂಕಿನ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಕೊರತೆ ಪರಿಹರಿಸುವಂತೆ ಸೂಚಿಸಿದರು.
ತಾಲೂಕು ಆರೋಗ್ಯ ಅಧಿಕಾರಿ ಸುಜಾತಾ ಉಕ್ಕಲಿ, ಬಿಇಒ ಪಿ.ಎಸ್. ಹೀರೆಮಠ, ಕೃಷಿ ಇಲಾಖೆ ಅಧಿಕಾರಿ ಪಿ.ಐ. ಮಾನೆ ಅವರು ತಮ್ಮ ಇಲಾಖೆಯ ಮಾಹಿತಿ ನೀಡಿದರು. ಜಿ.ಪಂ. ಉಪಾಧ್ಯಕ್ಷ ಸಂತೋಷ ರೇಣಕೆ, ಸದಸ್ಯ ರಮೇಶ ನಾಯ್ಕ, ಸಂಜಯ ಹಣಬರ, ತಾ.ಪಂ. ಅಧ್ಯಕ್ಷೆ ನರ್ಮದಾ ಪಾಟ್ನೆಕರ, ಉಪಾಧ್ಯಕ್ಷ ವಿಜಯ ಪಂಡಿತ, ಗ್ರಾ.ಪಂ. ಅಧ್ಯಕ್ಷೆ ಶೈಲಾ ನಾಯ್ಕ, ನಂದಿಗದ್ದಾ ಗ್ರಾ.ಪಂ. ಸದಸ್ಯ ಆರ್.ವಿ. ದಾನಗೇರಿ ಇದ್ದರು.
ಅಧಿಕಾರಿಗಳ ಮೇಲೆ ಮತ್ತಷ್ಟು ಭಾರ ಸಲ್ಲ
ಹಳಿಯಾಳ: ಅಧಿಕಾರಿಗಳ ಮೂಲಕ ಗ್ರಾಮ ಪಂಚಾಯಿತಿ ಅಧಿಕಾರ ನಡೆಸುವುದು ಸರಿಯಲ್ಲ. ಈಗಾಗಲೇ ಅಧಿಕಾರಿಗಳ ಮೇಲೆ ಸಾಕಷ್ಟು ಒತ್ತಡವಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ಎಲ್ಲ ಗ್ರಾಮ ಪಂಚಾಯತಿ ಸದಸ್ಯರ ಆಡಳಿತಾವಧಿಯು ಈ ತಿಂಗಳು ಮುಕ್ತಾಗೊಳ್ಳಲಿದೆ. ಹಾಗಾಗಿ ಪ್ರಸ್ತುತ ಅಧಿಕಾರದಲ್ಲಿರುವ ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರನ್ನು ಮುಂದಿನ ಚುನಾವಣೆ ನಡೆಸುವವರೆಗೆ ಮುಂದುವರಿಸಿದರೇ ಸೂಕ್ತ ಎಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸಿದ್ದೇನೆ ಎಂದರು.
ಹಳಿಯಾಳ ಮತ್ತು ಜೊಯಿಡಾದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಮತ್ತು ಜೊಯಿಡಾ ಪಾಲಿಟೆಕ್ನಿಕ್ ಕಾಲೇಜ್ ಉಪನ್ಯಾಸಕರು ಡೆಪೂಟೇಷನ್ ಮಾಡಿಕೊಂಡಿದ್ದರು. ಈ ವಿಷಯ ತಿಳಿದ ನಾಣು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಉಪ ಮುಖ್ಯಮಂತ್ರಿ ಡಾ.ಅಶ್ವತ ನಾರಾಯಣ ಅವರನ್ನು ಸಂರ್ಪಸಿ ಅವರ ಡೆಪ್ಯೂಟೇಶನ್ ರದ್ದು ಮಾಡಿದ್ದೇನೆ ಎಂದರು.
ಮೊದಲೇ ಎಲ್ಲೆಡೆ ಉಪನ್ಯಾಸಕರ ಕೊರತೆ ಇದೆ. ಹೀಗಿರುವಾಗ 6 ಉಪನ್ಯಾಸಕರ ಡೆಪ್ಯೂಟೇಷನ್ ಪಡೆದು ಕೊಂಡರೆ ಕಾಲೇಜ್ ಮುಚ್ಚುವುದೊಂದೆ ಬಾಕಿ ಎಂದು ಬೇಸರ ವ್ಯಕ್ತಪಡಿಸಿದರು.