ಬಾಗಲಕೋಟೆ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಽ ಆಡಳಿತದಿಂದ ದೇಶ, ರಾಜ್ಯದ ಜನತೆ ನಿರಾಶರಾಗಿದ್ದಾರೆ. ವಿದ್ಯಾವಂತರು, ಯುವ ಸಮೂಹ ಜಾಗೃತಿ ಹೊಂದಬೇಕು. ನನ್ನ ಗೆಲ್ಲಿಸಿ ಸಿದ್ಧರಾಮಯ್ಯನವರ ಕೈ ಬಲಪಡಿಸಿ ಎಂದು ಬಾಗಲಕೋಟೆ ಮತಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಎಚ್.ಮೇಟಿ.ಹೇಳಿದರು.
ಬಾಗಲಕೋಟೆ ಮತಕ್ಷೇತ್ರ ಬೆಣ್ಣೂರು, ಶಿರಗುಪ್ಪಿ,ತಳಗಿಹಾಳ ಇಲ್ಯಾಳ ಗ್ರಾಮದಲ್ಲಿ ಮನೆ ಮನೆ ತೆರಳಿ ಪ್ರಚಾರ ನಡೆಸಿ ಮಾತನಾಡಿದ ಅವರು, ನನ್ನ ಅಽಕಾರಿ ಅವಽಯಲ್ಲಿ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ದೇಶದಲ್ಲಿ ಜಾತ್ಯಾತೀತವಾಗಿ ಆಡಳಿತ ನಡೆಸುವ ಕಾಂಗ್ರೆಸ್ ಇಂದು ದೇಶ ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿದ್ದು,ಯೋಜನೆಗಳ ಮೂಲ ತಳಹದಿ ಕಾಂಗ್ರೆಸ್ ಪಕ್ಷ ಎಂದರು.
ಪರಶುರಾಮ ಮಹಾಜನವರ ಮಾತನಾಡಿ, ದೇಶದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ವಿವಿಧ ಇಲಾಖೆಗಳನ್ನು ಖಾಸಗೀಕರಣಗೊಳಿಸುವ ಮೂಲಕ ಸಂವಿಧಾನದ ಆಶಯಕ್ಕೆ ಧಕ್ಕೆ ತರುತ್ತಿದೆ. ರೈತರಿಗೆ ಸರಿಯಾಗಿ ಬೆಂಬಲ ಬೆಲೆಯಿಲ್ಲ, ಸಂವಿಧಾನ ಬದ್ಧ ಮೀಸಲಾತಿಯನ್ನು ತಗೆಯುತ್ತಿದೆ ಎಂದು ಆರೋಪಿಸಿದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮುತ್ತಪ್ಪ ಹುಗ್ಗಿ, ಮುಖಂಡರಾದ ಎಸ್.ಎನ್.ರಾಂಪುರ, ಅಶೋಕ ಲಾಗಲೋಟಿ, ಆರ್.ಎ.ಪಟ್ಟಣ, ಮಂಜುನಾಥ ವಾಸನದ, ಬಸವನಗೌಡ ಪಾಟೀಲ, ಲಕ್ಕನಗೌಡ ಚನ್ನಗೇರಿ, ರಾಮಣ್ಣ, ಲಕ್ಷö್ಮಣ ದಡ್ಡಿ ಇತರರು ಇದ್ದರು.