ತುಮಕೂರು: "ಗೆಟ್ಔಟ್', ಯಾವನೋ ತಲೆ ಹರಟೆ ಇದಾನೆ ಇವ್ನು, ಹುಚ್ಚಾಸ್ಪತ್ರೆಗೆ ಕಳುಹಿಸಿ'& ಈ ರೀತಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಪ್ರಸಂಗಗಳಿಗೆ ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ 3ನೇ ತೆಮಾಸಿಕ ಕೆಡಿಪಿ ಸಭೆ ಸಾಯಾಯಿತು. ಸಭೆಗೆ 1 ಗಂಟೆ ತಡವಾಗಿ ಬಂದ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕನನ್ನು "ಗೆಟ್ಔಟ್' (ಹೋಗಾಚೆ) ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಗದರಿ ಹೊರಗೆ ಕಳುಹಿಸಿದರೆ, ಯಾವನೋ ತಲೆ ಹರಟೆ ಇದಾನೆ ಇವ್ನು, ಹುಚ್ಚಾಸ್ಪತ್ರೆಗೆ ಕಳುಹಿಸಿ ಎಂದು ತುರುವೇಕೆರೆ ತಹಸೀಲ್ದಾರ್ನನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ತರಾಟೆಗೆ ತೆಗೆದುಕೊಂಡರು.
ಇನ್ನು ಜಿಲ್ಲೆಯ ಅಭಿವೃದ್ಧಿ ಬಿಟ್ಟು ಕೆಡಿಪಿ ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಚರ್ಚೆಗೆ ಸಮಯ ಮೀಸಲಿಟ್ಟಿರುವುದರಿಂದ ಅಸಮಾಧಾನಗೊಂಡ ಬಿಜೆಪಿ ಶಾಸಕ ಬಿ.ಸುರೇಶಗೌಡ ಸಭೆ ಬಹಿಷ್ಕರಿಸಿ ಹೊರನಡೆದರು.
ಸಭೆ ಆರಂಭದಿಂದಲೂ ಇಲಾಖೆ ನಡುವೆ ಹೊಂದಾಣಿಕೆ ಇಲ್ಲದ ಅಂಕಿ&ಅಂಶಗಳನ್ನಿಟ್ಟುಕೊಂಡು ಬಂದಿದ್ದ ಜಿಲ್ಲಾಮಟ್ಟದ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದ ಸಚಿವದ್ವಯರು, ತಮ್ಮದೇ ದಾಟಿಯಲ್ಲಿ ತರಾಟೆಗೆ ತೆಗೆದುಕೊಂಡರು. ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಸಭೆಗೆ ಆಗಮಿಸಿದ್ದರಿಂದ ಮೊದಲಿಗೆ ಗ್ಯಾರಂಟಿ ಯೋಜನೆಗಳ ಪ್ರಗತಿ ಕೈಗೆತ್ತಿಕೊಂಡ ಪರಮೇಶ್ವರ, ಗೃಹಲಕ್ಷಿ$್ಮ ಯೋಜನೆ ಮಾಹಿತಿ ಕೇಳಿದಾಗ ಆಹಾರ ಇಲಾಖೆ ಅಂಕಿ&ಅಂಶಕ್ಕೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಚೇತನ್ ಕುಮಾರ್ ನೀಡಿದ ಅಂಕಿ&ಅಂಶಕ್ಕೂ ಅಜಗಜಾಂತರವಿತ್ತು. ಇದರಿಂದ ಕೆರಳಿದ ಪರಮೇಶ್ವರ, ಅಧಿಕಾರಿಗಳು ಅನುಪಾಲನ ವರದಿ ಆಧರಿಸಿ ಸಿದ್ಧರಾಗಿ ಬರಬೇಕು. ಎಲ್ಲ ಕೈಬೀಸಿಕೊಂಡು ಬರುತ್ತೀರಾ, ನಿಮಗೆ ಜ್ಞಾನವಿಲ್ಲವೇ. ಇಲಾಖೆಯ ಡೇಟಾ ನಿಮ್ಮ ಬಳಿ ಇಲ್ಲವೇ?. ಇದು ಕಂಪ್ಯೂಟರ್ ಯುಗ. ಪ್ರತಿತಿಂಗಳು ಅಂಕಿ&ಅಂಶಗಳನ್ನು ಅಪ್ಡೇಟ್ ಮಾಡಲಿಕ್ಕೆ ಏನ್ ರೋಗ? ಇಲ್ಲದಿದ್ದರೆ ಸುಳ್ಳು ಮಾಹಿತಿ ಕೊಟ್ಟಂಗೆ ಆಗುತ್ತೆ ಎಂದು ಹರಿಹಾಯ್ದರು. ಜಿಲ್ಲಾಧಿಕಾರಿ ಶುಭಕಲ್ಯಾಣ್ ಹಾಗೂ ಜಿಪಂ ಸಿಇಒ ಜಿ.ಪ್ರಭು ಈ ವೇಳೆ ಮೌನಕ್ಕೆ ಶರಣಾದರು. ಶಾಸಕರಾದ ಸಿ.ಬಿ.ಸುರೇಶ್ಬಾಬು, ಎಂ.ಟಿ.ಕೃಷ್ಣಪ್ಪ, ಕೆ.ಷಡಕ್ಷರಿ, ಎಚ್.ವಿ.ವೆಂಕಟೇಶ್, ಜಿ.ಬಿ.ಜ್ಯೋತಿಗಣೇಶ್, ಎಂಎಲ್ಸಿ ಡಿ.ಟಿ.ಶ್ರೀನಿವಾಸ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಸೂರಜ್ ಹೆಗ್ಡೆ, ಸಮಿತಿಯ ಜಿಲ್ಲಾಧ್ಯಕ್ಷ ಜಿ.ಚಂದ್ರಶೇಖರಗೌಡ, ಎಸ್ಪಿ ಕೆ.ವಿ.ಅಶೋಕ್, ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ, ಡಿಎ್ಒ ಎಚ್.ಅನುಪಮಾ ಇದ್ದರು.
ತಾಳೆಯಾಗದ ಅಂಕಿ&ಅಂಶ : ರಾಜ್ಯ ಸರ್ಕಾರದ ಬಳಿ ಒಂದು ದತ್ತಾಂಶ ಇದೆ. ಆದರೆ, ಆಹಾರ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ನೀಡುತ್ತಿರುವ ಅಂಕಿ&ಅಂಶಗಳಿಗೆ ತಾಳೆ ಆಗುತ್ತಿಲ್ಲ. ಇನ್ನೂ ಜಿಲ್ಲಾ ಯೋಜನಾ ಮತ್ತು ಸಾಂಖ್ಯಿಕ ಅಧಿಕಾರಿ ಬಳಿಯಿರುವ ಅಂಕಿ&ಅಂಶಗಳೇ ಬೇರೆ. ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸಲಹೆ ನೀಡುವೆ, ಎಲ್ಲ ಇಲಾಖೆ ಬಳಿ ಅಂಕಿ&ಅಂಶ ಒಂದೇ ಇರಬೇಕು. ಒಂದು ವೇಳೆ ಹೆಚ್ಚು ಕಡಿಮೆ ಆಗಿದ್ದರೆ ಷರಾ ಬರೆಯಿರಿ. ಅದುಬಿಟ್ಟು ಅಂಕಿ&ಅಂಶಗಳ ಬಗ್ಗೆಯೇ ಒಂದೂವರೆ ಗಂಟೆ ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಸಚಿವ ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದರು.