ಕಲಬುರಗಿ: ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲ. ಭ್ರಷ್ಟಾಚಾರ ನಿರಂತರವಾಗಿದೆ. ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಆದರೆ ಕಾಂಗ್ರೆಸ್ ರ‍್ಕಾರ ಎರಡು ರ‍್ಷದ ಸಾಧನಾ ಸಮಾವೇಶ ಯಾವ ಪುರುಷರ‍್ಥಕ್ಕೆ ನಡೆಸುತ್ತಿದೆ ಎಂದು ಮಾಜಿ ಶಾಸಕ, ಬಿಜೆಪಿ ವಕ್ತಾರ ರಾಜಕುಮಾರ ಪಾಟೀಲ್ ತೆಲ್ಕೂರ ಪ್ರಶ್ನಿಸಿದರು.
ರಾಜ್ಯ ಕಾಂಗ್ರೆಸ್ ರ‍್ಕಾರ ಭ್ರಷ್ಟಾಚಾರದಲ್ಲಿ ತಲ್ಲೀನವಾಗಿದ್ದು, ಯುವಕರಿಗೆ ಉದ್ಯೋಗ ನೀಡದೆ, ನೇಮಕ ಪರೀೆಗಳಲ್ಲಿ ಅಕ್ರಮ ಹಗರಣ ನಡೆಸಿ, ದಲಿತರಿಗೆ ಮೀಸಲಿಟ್ಟ ಹಣ ದರ‍್ಬಳಕೆ ಮಾಡಿ ಅನ್ಯಾಯ ಮಾಡುತ್ತಿದೆ. ಅಲ್ಪಸಂಖ್ಯಾತರ ತುಷ್ಟೀಕರಣವೇ ಕಾಂಗ್ರೆಸ್ ರ‍್ಕಾರದ ಸಾಧನೆಯಾಗಿದೆ. ಇದೆಲ್ಲವನ್ನು ಹೇಳುವುದು ಸಾಧನಾ ಸಮಾವೇಶವೆ? ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಗುತ್ತಿಗೆದಾರರ ಬಿಲ್ ಪಾವತಿಸಲು ಶೇ.೬೦ ಲಂಚ ಸಚಿವರು ಕೇಳುತ್ತಿದ್ದಾರೆಂದು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ರಾಜ್ಯದಲ್ಲಿ ಮೂರು ಪ್ರಕಾರದ ಎಣ್ಣೆಗಳ ಬೆಲೆ ಏರಿಕೆ, ವಿದ್ಯುತ್ ಬಿಲ್, ಹಾಲಿನ ದರ ಹೆಚ್ಚಳ, ರೈತರಿಗೆ ಬೆಳೆ ವಿಮೆ ಪರಿಹಾರ ನೀಡದೆ ಅನ್ಯಾಯ ಮಾಡಲಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಶೈಕ್ಷಣಿಕ ಶುಲ್ಕ ಹೆಚ್ಚಿಸಿದ್ದನ್ನು ಸಮಾವೇಶದಲ್ಲಿ ಹೇಳುತ್ತಾರಾ ಎಂದು ಪ್ರಶ್ನಿಸಿದರು.
ರ‍್ಕಾರದ ವೈಲ್ಯಗಳ ಬಗ್ಗೆ ಪುಸ್ತಕ ಬಿಡುಗಡೆ ಮಾಡಲಾಗುವುದು. ದುಬಾರಿ ಜೀವನ ಅಭಿವೃದ್ಧಿ ಶೂನ್ಯ ಶೂನ್ಯ ಇದುವೇ ಕಾಂಗ್ರೆಸ್ ರ‍್ಕಾರದ ಸಾಧನೆ ಭಿತ್ತಿಪತ್ರ ಬಿಡುಗಡೆ ಮಾಡಿ, ಲೂಟಿ ಮಾಡುವುದೇ ಕೈ ರ‍್ಕಾರದ ಡ್ಯೂಟಿ ಎಂದರು.
ಶಾಸಕರಾದ ಬಿ.ಜಿ. ಪಾಟೀಲ್, ಬಸವರಾಜ ಮತ್ತಿಮಡು, ಡಾ.ಅವಿನಾಶ ಜಾಧವ್, ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಲಿಂಗರಾಜ ಬಿರಾದಾರ, ಸಂತೋಷ ಹಾದಿಮನಿ, ಬಾಬುರಾವ ಹಾಗರಗುಂಡಗಿ ಇದ್ದರು.