ಕೌಜಲಗಿ: ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂದ ಐದು ವರ್ಷದ ಅವಧಿಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಡಾ.ರಾಜೇಂದ್ರ ಸಣ್ಣಕ್ಕಿ ನೇತೃತ್ವದ ಅಭಿವೃದ್ಧಿ ಪೆನಲ್ 11 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಪರಿಶಿಷ್ಟ ಪಂಗಡ ೇತ್ರದಿಂದ ಬಸಪ್ಪ ಮಹಾಂತಪ್ಪ ಮರೆಣ್ಣವರ ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾದರು. ಉಳಿದ 11 ಸ್ಥಾನಗಳಿಗೆ ಚುನಾವಣೆ ನಡೆಯಿತು. ನೂತನ ನಿರ್ದೇಶಕರಾಗಿ ಸಿದ್ದಪ್ಪ ಹಳ್ಳೂರ, ನೀಲಪ್ಪ ಬಾಳಪ್ಪ ಕೇವಟಿ, ಅವ್ವಣ್ಣ ಮೋಡಿ, ರೇವಪ್ಪ ದಾನಣ್ಣವರ, ಯಲ್ಲಪ್ಪ ಸಣ್ಣಕ್ಕಿ, ಸಲೀಂ ಮುಲ್ತಾನಿ, ಸಿದ್ದಪ್ಪ ಬೀಸಗುಪ್ಪಿ, ರುಕ್ಮವ್ವ ಹುಂಡರದ, ಸುಮಿತ್ರಾ ಲೋಕನ್ನವರ, ಕೀರಪ್ಪ ಪೂಜನ್ನವರ, ವೆಂಕಟೇಶ ದಳವಾಯಿ ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಬಿ.ಬಿರಾದಾರಪಾಟೀಲ ಘೋಷಿಸಿದರು. ಅಭಿವೃದ್ಧಿ ಪೆನಲ್ ಮುಖಂಡ ರಾಜೇಂದ್ರ ಸಣ್ಣಕ್ಕಿ, ಶಿವಾನಂದ ಲೋಕನ್ನವರ ಇತರರಿದ್ದರು.