ಬಾಗಲಕೋಟೆ: ಹಿಂದುಳಿದ ಸಮುದಾಯ ಎಸ್ ಎಸ್ ಕೆ ಸಮಾಜದ ಅಭಿವೃದ್ಧಿ ನಿಗಮ ಮಂಡಳಿ ಮಾಡಬೇಕು ಎಂದು ಎಸ್ ಎಸ್ ಕೆ ಸಮಾಜದ ಅಧ್ಯಕ್ಷರಾದ ಗಣಪತಿಸಾ ದಾನಿ ಒತ್ತಾಯಿಸಿದ್ದಾರೆ.
ಅವರು ನವನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ,ರಾಜ್ಯದಲ್ಲಿ 10 ರಿಂದ 12 ಲಕ್ಷ ಜನಸಂಖ್ಯೆ ಇರುವ ನಮ್ಮ ಸಮಾಜದವರು,ಸಾವಜಿ ಹೋಟೆಲ್ ,ಇಡ್ಲಿ ಸೆಂಟರ್,ಮುದ್ರಣ,ಬುಕ್ ಬೈಂಡಿಂಗ್, ಬಟ್ಟೆ ವ್ಯಾಪಾರ ಸೇರಿದಂತೆ ಇತರ ವ್ಯಾಪಾರ ವಹಿವಾಟು ಮಾಡುತ್ತಾ ಸ್ವಾಭಿಮಾನ ದಿಂದ ಜೀವನ ಸಾಗಿಸುತ್ತಿದ್ದಾರೆ.ಹಿಂದುಳಿದ ಸಮಾಜದ ಆಗಿದ್ದರಿಂದ ಆರ್ಥಿಕವಾಗಿ ಹಿಂದೆ ಉಳಿದಿದ್ದಾರೆ.ಈ ಹಿನ್ನೆಲೆಯಲ್ಲಿ ಸಮಾಜದ ಅಭಿವೃದ್ಧಿ ಗಾಗಿ ನಿಗಮ ಮಂಡಳಿ ಮಾಡುವಂತೆ ಸರ್ಕಾರ ಒತ್ತಾಯ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ನಾಗರಾಜ ನಗರಿ ಮಾತನಾಡಿ, ಈಗಾಗಲೇ ನಿಗಮ ಮಂಡಳಿ ಸೇರಿದಂತೆ ಇತರ ಸಮಸ್ಯೆಗಳನ್ನು ಬಗೆ ಹರಿಸುವಂತೆ ಸಿ ಎಂ ಗೆ ಹಾಗೂ ಇತರ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ,ಬೆಳಗಾವಿ ಅಧಿವೇಶನ ಸಮಯದಲ್ಲಿ ಹೋರಾಟ ಸಹ ಮಾಡಲಾಗಿದೆ.ಆದರೂ ಸರ್ಕಾರ ಗಮನ ಹರಿಸುತ್ತಿಲ್ಲ ಎಂದರು.ಇದೇ ಸಮಯದಲ್ಲಿ ಗುಳೇದಗುಡ್ಡ ಎಸ್ ಎಸ್ ಕೆ ಸಮಾಜದ ಅಧ್ಯಕ್ಷರಾದ ಪರಶುರಾಮಸಾ ಪವಾರ ಮಾತನಾಡಿ, ಸಮಾಜ ಅಭಿವೃದ್ಧಿ ಪಡಿಸಲು ರಾಜ್ಯದ್ಯಂತ ಸಂಚಾರ ಮಾಡಿ, ಸಂಘಟನೆ ಮಾಡಲಾಗಿದೆ.ಇದೇ ಜನವರಿ 20 ರಂದು ಗುಳೇದಗುಡ್ಡ ಪಟ್ಟಣದಲ್ಲಿ ಜಿಲ್ಲಾ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ.ಜಿಲ್ಲೆಯ ಸಮಾಜದ ಮುಖಂಡರು ಹಾಗೂ ಪ್ರಮುಖರು ಭಾಗವಹಿಸಲಿದ್ದು,ಹೋರಾಟದ ಮುಂದಿನ ರೂಪರೇಷನ್ ಗಳನ್ನು ಚಿಂತನೆ ಮಾಡಲಾಗುವುದು. ಸರ್ಕಾರ ನಮ್ಮ ಸಮಾಜದ ಅಭಿವೃದ್ಧಿ ನಿಗಮ ಸೇರಿದಂತೆ ಇತರ ಯೋಜನೆಯನ್ನು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದರು.
ಇಡೀ ರಾಜ್ಯದ್ಯಂತ ಸಮಾಜದ ಸಂಘಟನೆ ಮಾಡುತ್ತಿದ್ದು,ಸರ್ಕಾರ ನಮ್ಮ ಸಮಾಜದ ಬೇಡಿಕೆಗಳನ್ನು ಇಡೇರಿಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಸಂಜೀವ ಖಟವಟೆ,ರವಿ ದಾಮಜಿ,ತುಳಜಣಸಾ ದಾನಿ ಸೇರಿದಂತೆ ಇತರ ಪ್ರಮುಖರು ಇದ್ದರು.