ಜಿಲ್ಲೆ

ಅಭಿವೃದ್ಧಿ ಕುಂಠಿತಕ್ಕೆ ಜಿಲ್ಲೆ ಅಧಿಕಾರಿಗಳೇ ಕಾರಣ

ಕೊರಟಗೆರೆ ಪಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶ, ಸಮಸ್ಯೆಗಿಲ್ಲ ಸ್ಪಂದನೆ

ಕೊರಟಗೆರೆ: ಪಟ್ಟಣದ ಅನೇಕ ಅಭಿವೃದ್ಧಿ ಕಾಮಗಾರಿಗಳ ಕುಂಠಿತಕ್ಕೆ ಜಿಲ್ಲೆಯ ಅಧಿಕಾರಿಗಳೇ ಪರೋಕ್ಷ ಕಾರಣ ಎಂದು ಪಟ್ಟಣ ಪಂಚಾಯಿತಿಯ ಹಲವು ಸದಸ್ಯರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಪಟ್ಟಣ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಪಟ್ಟಣ ಪಂಚಾಯತಿ ಹಲವು ಕಾಮಗಾರಿಗಳ ವಿಳಂಬಕ್ಕೆ ಜಿಲ್ಲಾ ಯೋಜನಾ ನಿರ್ದೇಶಕರೇ ಕಾರಣರಾಗಿದ್ದಾರೆ. ಅವರು ಪಟ್ಟಣ ಪಂಚಾಯಿತಿಗೆ ಬಂದು ಹೇಳುವುದೇ ಒಂದು ಅವರ ಕಚೇರಿಯಲ್ಲಿ ಮಾಡುವುದೇ ಒಂದಾಗಿದೆ. ಇವರ ಜತೆಗೆ ಜಿಲ್ಲಾಧಿಕಾರಿಗಳು ನಮ್ಮಗಳ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಇದರಿಂದ ಪಟ್ಟಣದ ಅನೇಕ ಸಮಸ್ಯೆಗಳು ಹಾಗೆಯೆ ಉಳಿದಿವೆ ಎಂದು ಅಸಮಾಧಾನ ಹೊರಹಾಕಿದರು.ಪಟ್ಟಣ ಪಂಚಾಯತಿ ಸದಸ್ಯ ಕೆ.ಆರ್​.ಓಬಳರಾಜು

ಮಾತನಾಡಿ, ಪಟ್ಟಣದಲ್ಲಿ ಪರಿಶಿಷ್ಟ ಜಾತಿ ಅನುದಾನದಲ್ಲಿ ನಿರ್ಮಿಸಿರುವ ಅಂಗಡಿ ಮಳಿಗೆ ಕಟ್ಟಿ 6 ವರ್ಷಗಳಾದರೂ ಹರಾಜು ಆಗಿಲ್ಲ, ಈ ಸಂಬಂಧ ಹಲವು ಸಭೆಯಲ್ಲಿ ವಿಷಯ ಮಂಡನೆ ಮಾಡಿ ಬೇಡಿಕೆ ಕಳಿಸಿದರು ಜಿಲ್ಲೆಯ ಯೋಜನಾ ನಿರ್ದೇಶಕರು ರ್ನಿಲಕ್ಷ$್ಯ ವಹಿಸಿದ್ದಾರೆ. ಪೌರಾಡಳಿತ ಇಲಾಖೆಗೆ ಕಳುಹಿಸಿರುವ ಕಡತಕ್ಕೆ ಬೆಲೆಯಿಲ್ಲ. ಇನ್ನು ಅಧಿಕಾರಿಗಳನ್ನು ಕಾದರೆ ಆಗುವುದಿಲ್ಲ. ಮುಖ್ಯಾಧಿಕಾರಿಗಳು ಘಟನ್ನೋತ್ತರ ವರದಿ ಮೇರೆಗೆ ಅವುಗಳನ್ನು ಹರಾಜು ಮಾಡುವಂತೆ ಒತ್ತಾಯಿಸಿದರು. ಎಲ್ಲ ಸದಸ್ಯರ ಆಗ್ರಹದಂತೆ ೆ.15ಕ್ಕೆ ಅಂಗಡಿ ಹರಾಜು ಮಾಡುವ ರ್ನಿಣಯ ಕೈಗೊಳ್ಳಲಾಯಿತು.

ಸದಸ್ಯ ಕೆ.ಎನ್​.ಲಕ್ಷ್ಮೀನಾರಾಯಣ್​ ಮಾತನಾಡಿ, ಪಟ್ಟಣ ಪಂಚಾಯಿತಿಯಿಂದ ಪೌರಕಾರ್ಮಿಕರಿಗೆ 14 ಮನೆಗಳನ್ನು ನಿಮಾರ್ಣ ಮಾಡಿ ಕೊಟ್ಟು 6 ವರ್ಷಗಳಾಗಿ ಅವರಿಗೆ ಇಲ್ಲಿಯವರೆಗೆ ಮನೆ ನೀಡದೆ ಅವು ಹಾಳಾಗುತ್ತಿವೆ. ರಾಜ್ಯ ಸರ್ಕಾರದ 6 ಲಕ್ಷ ರೂ.ಬಂದಿದೆ. ಆದರೆ ಕೆಂದ್ರ ಸರ್ಕಾರದ 1.50 ಲಕ್ಷ ರೂ. ಬರಲಿಲ್ಲ. ಆ ವಂತಿಕೆ ಬರುವುದು ಅನುಮಾನವಾಗಿದೆ. ಕೇಂದ್ರದ ಹಣ ಕಾದು ಕುಳಿತರೆ ಆಗುವುದಿಲ್ಲ. ಪಟ್ಟಣ ಪಂಚಾಯಿತಿಯ ಹಣದಲ್ಲಿ ಪೌರಕಾರ್ಮಿಕರ ಕೇಂದ್ರ ಸರ್ಕಾರದ ವಂತಿಕೆ ನೀಡಿ ಮೂಲ ಸೌಕರ್ಯ ಒದಗಿಸಿ ಅವರಿಗೆ ಮನೆ ನೀಡುವಂತೆ ಒತ್ತಾಯಿಸಿದರು. ಇದಕ್ಕೆ ಸಭೆಯಲ್ಲಿ ಎಲ್ಲರೂ ಒಪ್ಪಿ ರ್ನಿಣಯ ಕೈಗೊಂಡರು.

ಸದಸ್ಯ ನಂದೀಶ್​ ಮಾತನಾಡಿ, ಕೊರಟಗೆರ ಪಟ್ಟಣದಲ್ಲಿ ಸ್ಲಂ ಬೋಡ್​ನವರು ಮಾಡಿರುವ ಅವಾಂತರ ಹೇಳತೀರದಾಗಿದೆ. ಪಟ್ಟಣದ 44 ಕುಟುಂಬಗಳಿಗೆ ಮನೆ ನಿರ್ಮಿಸಿಕೊಡುವ ಭರವಸೆ ನೀಡಿವಂತಿಕೆ ಕಟ್ಟಿಸಿಕೊಂಡು ವರ್ಷಗಳಾದರೂ ಅವರಿಗೆ ಮನೆ ಕಟ್ಟಿಕೊಟ್ಟಿಲ್ಲ. ಪಟ್ಟಣದ ಕಾಮೇನಹಳ್ಳಿ ಆಶ್ರಯ ಮನೆಗಳ ನಿವೇಶನಗಳಲ್ಲಿ ನಿರ್ಮಿಸಿರುವ ಸ್ಲಂ ಬೋಡ್​ ಮನೆಗಳ ಪರಿಸ್ಥಿತಿ ಹೀಗೆ ಆಗಿದೆ. ಜಿಲ್ಲಾಧಿಕಾರಿಗಳು ಬಂದು ಸ್ಥಳ ಪರಿಶೀಲನೆ ಮಾಡಿದರೂ ಪ್ರಯೋಜನವಾಗಲಿಲ್ಲ. ಸ್ಲಂ ಬೋರ್ಡ್​ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ಸದಸ್ಯ ನಟರಾಜು ಮಾತನಾಡಿ, ಕೊರಟಗೆರೆ ಪಟ್ಟಣದ ಮಟನ್​ ಮಾರ್ಕೆಟ್​ ವೃತ್ತ, ಪೋಸ್ಟ್​ ಆಫೀಸ್​, ಪಶು ಆಸ್ಪತ್ರೆ ಮುಂಭಾಗ ಸೇರಿ ಪಟ್ಟಣದ ಹಲವು ಕಡೆ ಕೋಳಿ ಮತ್ತು ಮಟನ್​ ಅಂಗಡಿ ನಡೆಯುತ್ತಿದ್ದು, ಆ ಪ್ರದೇಶದಲ್ಲಿ ದುರ್ವಾಸನೆ ಉಂಟಾಗಿ ಓಡಾಡಲು ಆಗುತ್ತಿಲ್ಲ. ಇದರಿಂದ ಆರೋಗ್ಯ ಸಮಸ್ಯೆಗೆ ಜನರಲ್ಲಿ ಹೆಚ್ಚಾಗುತ್ತಿದೆ. ಪಟ್ಟಣದ ಎಲ್ಲ ಮಾಂಸದ ಅಂಗಡಿಗಳನ್ನು ಊರಿನ ಪಕ್ಕದಲ್ಲಿ ಒಂದೆಗೆ ಸಾಗಿಸುವಂತೆ ಒತ್ತಾಯಿಸಿದರು. ಸದಸ್ಯ ಪುಟ್ಟನರಸಯ್ಯ ಮಾತನಾಡಿ, ಕೊರಟಗೆರೆಯಲ್ಲಿ ಹಂದಿ ಅಂಗಡಿಗಳು ಹೆಚ್ಚಾಗಿವೆ. ಅವುಗಳನ್ನು ಸ್ಥಳಾಂತರಿಸಿಸುವಂತೆ ಹಾಗೂ ಪಟ್ಟಣದಲ್ಲಿನ ಗುಂಡು ತೋಪು ಪಂಚಾಯತಿ ಜಾಗಗಳನ್ನು ಗುರುತಿಸಿ ಸ್ವಾಧಿನಕ್ಕೆ ಪಡೆಯುವಂತೆ ಆಗ್ರಹಿಸಿದರು. ಪಟ್ಟಣ ಪಂಚಾಯತಿಯಿಂದ ಪೌರಕಾರ್ಮಿಕರಿಗೆ ಮತ್ತು ನೀರು ಸರಬರಾಜುದಾರರಿಗೆ ಜರ್ಕಿನ್​ ವಿತರಿಸಲಾಯಿತು. ಸದಸ್ಯ ಎ.ಡಿ.ಬಲರಾಮಯ್ಯ ಮಾತನಾಡಿದರು. ಅರ್​.ಐ.ಶೈಲೇಂದ್ರ, ಹುಸೇನ್​, ವೇಣುಗೋಪಾಲ್​, ಸಾವಿತ್ರಮ್ಮ, ನಾಗರತ್ನಮ್ಮ ಇದ್ದರು.