ಚಾಮರಾಜನಗರ: ವಿಶೇಷ ಟಕ ಯೋಜನೆಯಡಿ ತಾಲೂಕಿನ ಮಲ್ಲಯ್ಯನಪುರ, ಕಡುವಿನಕಟ್ಟೆಹುಂಡಿ, ಅರಳೀಪುರ ಹಾಗೂ ಅಯ್ಯನಪುರ ಗ್ರಾಮಗಳಲ್ಲಿ ರಸ್ತೆ, ಚರಂಡಿ ಅಭಿವದ್ಧಿ ಕಾಮಗಾರಿಗಳಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಶನಿವಾರ ಭೂಮಿಪೂಜೆ ನೆರವೇರಿಸಿದರು.
ನಂತರ ವಾತನಾಡಿದ ಅವರು, ಮಲ್ಲಯ್ಯನಪುರ ಗ್ರಾಮದಲ್ಲಿ ಕುರುಬ ಹಾಗೂ ಕುಂಬಾರ ಬೀದಿಗೆ 30 ಲಕ್ಷ ರೂ., ಕೆ.ಕೆ. ಹುಂಡಿ ಗ್ರಾಮದ ಕುರುಬ ಹಾಗೂ ಕುಂಬಾರಬೀದಿಗೆ 20ಲಕ್ಷ ರೂ., ಅರಳೀಪುರ ಕುರುಬ ಹಾಗೂ ಕುಂಬಾರ ಬೀದಿಗೆ 30 ಲಕ್ಷ ರೂ., ಅಯ್ಯನಪುರ ಗ್ರಾಮದ ಲಿಂಗಾಯತರ ಬೀದಿಗೆ 10 ಲಕ್ಷ ರೂ. ಸೇರಿದಂತೆ ಒಟ್ಟು 90 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಸಿಸಿ ರಸ್ತೆ ಚರಂಡಿ ಅಭಿವದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದರು.
ಗ್ರಾಮೀಣ ಪ್ರದೇಶಗಳ ಜನರ ಅನುಕೂಲಕ್ಕಾಗಿ ತಮ್ಮ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ ರಸ್ತೆ ಅಭಿವದ್ದಿ ಕಾಮಗಾರಿಗಳು ಹಲವಾರು ಗ್ರಾಮಗಳಲ್ಲಿ ಪೂರ್ಣಗೊಂಡಿದ್ದು, ಇನ್ನು ಕೆಲವು ಗ್ರಾಮಗಳಲ್ಲಿ ಪ್ರಗತಿಯಲ್ಲಿವೆ. ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಜನರಿಗೆ ಅಗತ್ಯವಾಗಿ ಬೇಕಾದ ರಸ್ತೆ, ಚರಂಡಿ, ಕುಡಿಯುವ ನೀರು, ವಸತಿ ಸೇರಿದಂತೆ ಎಲ್ಲ ಸಮುದಾಯದವರಿಗೂ ಸಮುದಾಯ ಭವನಗಳನ್ನು ನಿರ್ಮಿಸಿಕೊಡಲಾಗುತ್ತಿದೆ. ಯಾವ ಗ್ರಾಮದ ಬಡಾವಣೆಗಳಲ್ಲಿ ಸಿಸಿರಸ್ತೆ, ಚರಂಡಿ ಇಲ್ಲವೋ ಅಲ್ಲಿಯೂ ಕೂಡ ಸರ್ಕಾರದ ಅನುದಾನದಲ್ಲಿ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.
ಶಿವಪುರ ಗ್ರಾ.ಪಂ. ಅಧ್ಯಕ್ಷೆ ಎಂ.ಸಿ.ಮಹದೇವಮ್ಮ, ಉಪಾಧ್ಯಕ್ಷ ಕುವಾರಸ್ವಾಮಿ, ಹೆಬ್ಬಸೂರು ಗ್ರಾ.ಪಂ. ಅಧ್ಯಕ್ಷ ಜಯಶಂಕರ್, ಉಪಾಧ್ಯಕ್ಷೆ ಪ್ರತಿವಾ, ಕಾರ್ಮಿಕ ಕನಿಷ್ಠ ವೇತನ ಸಲಹ ಮಂಡಳಿ ವಾಜಿ ಅಧ್ಯಕ್ಷ ಆರ್.ಉಮೇಶ್, ಬಗರ್‌ಹುಕುಂ ಸಾಗುವಳಿ ಸಮಿತಿ ವಾಜಿ ಸದಸ್ಯರಾದ ವೀರಭದ್ರಸ್ವಾಮಿ, ರಂಗಸ್ವಾಮಿ, ಶಿವಣ್ಣ, ಉಮೇಶ್, ಮಹದೇವಸ್ವಾಮಿ, ಕೆ.ಕೆ.ಹುಂಡಿನಾಗರಾಜು, ಶಿವಕುವಾರ್ ಕೆಆರ್‌ಐಡಿಎಲ್ ಎಂಜಿನಿಯರ್ ಮಧುಸೂಧನ್, ಗ್ರಾಪಂ ಸದಸ್ಯರು, ಮುಖಂಡರು ಇದ್ದರು.