ಬಾಳೆಲೆಯಲ್ಲಿ ಇ- ತ್ಯಾಜ್ಯ ಸಂಗ್ರಹ ಅಭಿಯಾನ. 
ಜಿಲ್ಲೆ

ಅಭಿಯಾನದಲ್ಲಿ 55 ಕೆ.ಜಿ.ಎಲೆಕ್ಟ್ರಾನಿಕ್ ತ್ಯಾಜ್ಯ ಸಂಗ್ರಹ

ಗೋಣಿಕೊಪ್ಪ: ಗೋಣಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ನಡೆದ ಇ-ತ್ಯಾಜ್ಯ ಸಂಗ್ರಹ ಅಭಿಯಾನದಲ್ಲಿ ಸುಮಾರು 55 ಕೆ.ಜಿ.ಎಲೆಕ್ಟ್ರಾನಿಕ್ ತ್ಯಾಜ್ಯಗಳನ್ನು ಸಂಗ್ರಹಿಸಲಾಯಿತು.

ಅಂಚೆ ಕಚೇರಿ ಸಮೀಪದ ಕಾರ್ಯಪ್ಪ ಪ್ಲಾಜಾ, ಎಂ.ಸಿ.ಮಾದಪ್ಪ ಪೆಟ್ರೋಲಿಯಂ, ಬಾಳೆಲೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಸಂಗ್ರಹ ಮಾಡಲಾಯಿತು. ಸುತ್ತಲಿನ ಗ್ರಾಮಸ್ಥರು ತ್ಯಾಜ್ಯ ನೀಡಿದರು.

ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನ್ನಕಮನೆ ಸೌಮ್ಯಾ ಬಾಲಕೃಷ್ಣ, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಅಮ್ಮಂಡ ಚಿಣ್ಣಪ್ಪ, ಕಾರ್ಯದರ್ಶಿ ಪೊನ್ನಿಮಾಡ ಲೋಕೇಶ್ ಕಾರ್ಯಪ್ಪ, ಸದಸ್ಯ ಕೆ.ಸಿ. ಅಚ್ಚಯ್ಯ, ಉದ್ಯಮಿ ಮಚ್ಚಮಾಡ ಅನೀಶ್ ಮಾದಪ್ಪ, ಬಾಳೆಲೆ ಗ್ರಾಪಂ ಅಧ್ಯಕ್ಷ ಪೋಡಮಾಡ ಸುಕೇಶ್ ಇದ್ದರು.