ಜಿಲ್ಲೆ

ಅಭಿಮಾನಿಗಳಿಗೆ ಕೈ ಸನ್ನೆ ಮಾಡಿದ ದರ್ಶನ್

ಬಳ್ಳಾರಿ : ಇಲ್ಲಿನ ಕೇಂದ್ರ ಕಾರಾಗೃಹದ ಸಂದರ್ಶಕರ ಕೊಠಡಿಗೆ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಅಪ್ತರ ಭೇಟಿಗೆ ತೆರಳುವ ವೇಳೆ ‘ ನೀವು ನನ್ನ ಹೃದಯದಲ್ಲಿ ಇದ್ದಿರಿ’ ಎಂಬುದಾಗಿ ಅಭಿಮಾನಿಗಳಿಗೆ ಎದೆ ಮುಟ್ಟಿ ಕೈ ಸನ್ನೆ ಮಾಡಿದರು.
ಇಲ್ಲಿನ ಕೇಂದ್ರ ಕಾರಾಗೃಹಕ್ಕೆ ದರ್ಶನ್ ಭೇಟಿಗೆ ಗುರುವಾರ ಆಗಮಿಸಿದ ಸಂಗೀತ ನಿರ್ದೇಶಕ ಹರಿಕೃಷ್ಣ, ಶೈಲಜಾ ನಾಗ್ ಡ್ರೈ ಫ್ರೂಟ್ಸ್, ತಿಂಡಿ ತಿನಿಸು ಸೇರಿದ ಬ್ಯಾಗ್‌ಗಳನ್ನು ತಂದಿದ್ದರು. ಬಳಿಕ ಜೈಲು ಸಿಬ್ಬಂದಿ ದಾಖಲೆಗಳು ಪರಿಶೀಲಿಸಿ ಕೈದಿಗಳ ಸಂದರ್ಶಕರ ಕೋಣೆಗೆ ಕಳುಹಿಸಲಾಯಿತು. ಹೈ ಸೆಕ್ಯೂರಿಟಿ ಸೆಲ್‌ನಿಂದ ದರ್ಶನ್ ಕರೆ ತರುವ ವೇಳೆ ಜೈಲು ಗೇಟಿನ ಮುಂಭಾಗದಲ್ಲಿನ ಅಭಿಮಾನಿಗಳನ್ನು ಕಂಡು ದರ್ಶನ್ ನಗುವಿನ ಮುಖದಲ್ಲಿಯೇ ‘ ನೀವು ನನ್ನ ಹೃದಯಲ್ಲಿ ಇರುವಿರಿ ’ ಎಂದು ಕೈ ಸನ್ನೆ ಮಾಡಿದರು. ಬಳಿಕ ಅಭಿಮಾನಿಗಳು ಜೈ ಡಿ ಬಾಸ್, ಚಾಲೆಂಜಿಗ್ ಸ್ಟಾರ್ ದರ್ಶನ್ ಎಂದು ಘೋಷಣೆ ಕೂಗಿದರು. ಬಳಿಕ ಅರ್ಧ ಗಂಟೆಯವರೆಗೆ ಸಂಗೀತ ನಿರ್ದೇಶಕ ಹರಿಕೃಷ್ಣ, ಶೈಲಜಾ ನಾಗ್ ಜತೆ ಮಾತುಕತೆ ನಡೆಸಿದರು. ಶೀಘ್ರದಲ್ಲಿಯೇ ಜಾಮೀನು ದೊರೆಯಲಿದ್ದು, ಆರೋಗ್ಯ ಕಾಪಾಡಿಕೊಳ್ಳಿ ಎಂದು ಹರಿಕೃಷ್ಣ ಎಂದು ದರ್ಶನ್‌ಗೆ ಧೈರ್ಯ ತುಂಬಿದರು. ಬಳಿಕ, ಬ್ಯಾಗ್‌ಗಳನ್ನು ತೆಗೆದುಕೊಂಡು ದರ್ಶನ್ ಮರಳಿ ಸೆಲ್‌ಗೆ ಹೊರಟರು. ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡ ಬಳಿಕ ಮೊದಲ ಬಾರಿಗೆ ಹರಿಕೃಷ್ಣ ಭೇಟಿ ನೀಡಿದರು.