ಜಿಲ್ಲೆ

ಅಬಕಾರಿ ವ್ಯಾಪಾರಿ ಸ್ನೇಹಿಗೆ ಕ್ರಮ

ಕಲಬುರಗಿ: ರಾಜ್ಯದ ಅಬಕಾರಿ ವಲಯದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಇಡುತ್ತಿದ್ದು, ಜುಲೈನಿಂದ ವ್ಯಾಪಕ ತಿದ್ದುಪಡಿ ಮಾಡಿ ಅಬಕಾರಿ ವ್ಯಾಪಾರಿ ಸ್ನೇಹಿ ಕ್ರಮ ಜಾರಿಗೊಳಿಸಲಾಗುವುದು ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಜಿ¯್ಲÁ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್‌ನಿಂದ ಶನಿವಾರ ಆಯೋಜಿಸಿದ್ದ ಸನ್ಮಾನ ಹಾಗೂ ಅಬಕಾರಿ ವ್ಯಾಪಾರಸ್ಥರ ಜತೆ ಸಭೆಯಲ್ಲಿ ಮಾತನಾಡಿ, ಕರ್ನಾಟಕ ಮತ್ತು ನೆರೆ ರಾಜ್ಯಗಳಲ್ಲಿ ದೊರಕುವ ಮದ್ಯದ ದರಗಳಲ್ಲಿ ವ್ಯತ್ಯಾಸವಿದ್ದು, ಇದಕ್ಕೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿರುವ ಮದ್ಯದಂಗಡಿ ಮತ್ತು ಬಾರ್ ವ್ಯಾಪಾರಸ್ಥರಿಗೆ ತೊಂದರೆ ಆಗುತ್ತಿರುವುದರಿಂದ ಇನ್ಮುಂದೆ ಎಂಎಸ್‌ಐಎಲï ಮದ್ಯದ ಅಂಗಡಿ ತೆರೆಯಲು ಅನುಮತಿ ಸಿಗಲ್ಲ. ಹೊಸ ಬಾರ್, ವೈನ್‌ಶಾಪ್‌ಗಳಿಗೆ ಮಾತ್ರ ಅನುಮತಿ ಕೊಡಲಾಗುವುದು ಎಂದು ತಿಳಿಸಿದರು.
ಜೆಡಿಎಸ್ ಜಿ¯್ಲÁಧ್ಯP್ಷÀ ಬಾಲರಾಜ ಗುತ್ತೇದಾರ್ ಮಾತನಾಡಿ, ಮದ್ಯ ವ್ಯಾಪಾರಿಗಳು ಶೇ.೧೦ ಕಮಿಷನ್ ಹೊಂದಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ವ್ಯಾಪಾರ ವಹಿವಾಟು ನಡೆಸಲು ಕನಿಷ್ಟ ಶೇ.೨೦ ಕಮಿಷನ್ ನಿಗದಿಗೊಳಿಸಬೇಕು. ಪೊಲೀಸರು ಮತ್ತು ಅಬಕಾರಿ ಇಲಾಖೆಯವರು ಮದ್ಯ ವ್ಯಾಪಾರಗಳಿಗೆ ನೀಡುವ ಕಿರುಕುಳ ತಪ್ಪಿಸಿ, ಆದಾಯ ತಂದು ಕೊಡುವ ಉದ್ಯಮಕ್ಕೆ ವ್ಯಾಪಾರಸ್ಥರಿಗೆ ನೆರವಾಗಬೇಕು ಎಂದು ಮನವಿ ಮಾಡಿದರು.
ಅಸೋಸಿಯೇಷನ್ ಗೌರವಾಧ್ಯP್ಷÀ ವೀರಯ್ಯ ಗುತ್ತೇದಾರ್ ಮಾತನಾಡಿ, ಜಿ¯್ಲÉಯಲ್ಲಿ ಕಾನೂನಿನ ಕುಂಟು ನೆಪ ಹೇಳಿ ೨೫ಕ್ಕೂ ಹೆಚ್ಚು ಮದ್ಯದಂಗಡಿಗಳ ಬಾಗಿಲು ಮುಚ್ಚಿಸಲಾಗಿದೆ. ಅಬಕಾರಿ ಇಲಾಖೆ ಇಂತಹ ಕಠಿಣ ನಿಲುವು ಸಡಿಲಗೊಳಿಸುವುದು ಅಗತ್ಯ ಎಂದರು.
ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ್ ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯP್ಷÀ ಅಶೋಕ ಗುತ್ತೇದಾರ್ ಬಡದಾಳ, ಅಬಕಾರಿ ಹೆಚ್ಚುವರಿ ಆಯುಕ್ತ ನಾಗರಾಜಪ್ಪ, ಜಂಟಿ ಆಯುಕ್ತ ಬಸವರಾಜ ಎಚ್., ಅಬಕಾರಿ ಜಿ¯್ಲÁಧಿಕಾರಿ ಸಯ್ಯದ್ ಹಜ್ಮತ್ ಆಫ್ರಿನ್, ಡೆಪ್ಯುಟಿ ಸೂಪರಿಂಟೆAಡೆAಟ್ ದೊಡ್ಡಪ್ಪಗೌಡ, ಪ್ರಮುಖರಾದ ಪವನ್ ಗುತ್ತೇದಾರ್, ಶ್ಯಾಮ್ ನಾಟಿಕಾರ್, ವೆಂಕಟೇಶ ಕಡೇಚೂರ, ರಾಜಗೋಪಾಲ ರೆಡ್ಡಿ, ಅP್ಷÀಯ್ ಗುತ್ತೇದಾರ್, ತಿಮ್ಮಪ್ಪ ಗಂಗಾವತಿ, ಅಶೋಕ್ ಗುತ್ತೇದಾರ್ ಅಳಂದ, ಸುರೇಶ ಗುತ್ತೇದಾರ್ ಮಟ್ಟೂರು, ಅಂಬಯ್ಯ ಗುತ್ತೇದಾರ್, ಆಕಾಶ ಗುತ್ತೇದಾರ್, ರಾಜೇಶ ಗುತ್ತೇದಾರ್, ಜೀವನಕುಮಾರ ಜತ್ತನ್, ಶೇಖರ್ ಗಾರಂಪಳ್ಳಿ, ದಯಾನಂದ ಪೂಜಾರಿ, ಅನಿಲï ಯಾರಗೋಳ್, ಬಸವರಾಜï ಸ್ವಾಮಿ ಇತರರಿದ್ದರು.