ಜಿಲ್ಲೆ

ಅಬಕಾರಿ ದಾಳಿ ೧೧೫ ಪ್ರಕರಣ ದಾಖಲು

ಬಾಗಲಕೋಟೆ: ಲೋಕಸಭಾ ಚುನಾವಣೆ-೨೦೨೪ರ ನೀತಿ ಸಂಹಿತೆ ಪ್ರಾರಂಭವಾದ ದಿನಾಂಕದಿಂದ ಮಾರ್ಚ ೩೧ ವರೆಗೆ ಒಟ್ಟು ೧೧೫ ಅಬಕಾರಿ ಪ್ರಕರಣಗಳನ್ನು ದಾಖಲಿಸಿ, ೧೦೨ ಜನ ಆರೋಪಿಗಳನ್ನು ಬಂಧಿಸಿ ಕ್ರಮಜರುಗಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸದರಿ ಪ್ರಕರಣಗಳಲ್ಲಿ ೮೮೬ ಲೀ ಮಧ್ಯ, ೧೩೩ ಲೀ ಹೊರ ರಾಜ್ಯದ ಮದ್ಯ, ೧೦೬ ಲೀಟರ್ ಬಿಯರ್, ೩೦ ಲೀಟರ ಕಳ್ಳಬಟ್ಟಿ ಸಾರಾಯಿ, ೧೦ ಲೀಟರ್ ಕೊಳೆ, ೨೦ ದ್ವೀಚಕ್ರ ವಾಹನ, ೧ ಆಟೋ, ೪ ಕರ‍್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಅಂದಾಜು ಮೌಲ್ಯ ೫೩ ಲಕ್ಷ ರೂ.ಗಳದ್ದಾಗಿದೆ.
ಜಿಲ್ಲೆಯ ಯಾವುದೇ ಸ್ಥಳಗಳಲ್ಲಿ ಅಬಕಾರಿ ಅಕ್ರಮಗಳು ಕಂಡುಬAದಲ್ಲಿ ಆಯಾ ಕಾರ್ಯವ್ಯಾಪ್ತಿಯ ಅಬಕಾರಿ ಅಧಿಕಾರಿಗಳ ಸಂಚಾರಿ ದೂರವಾಣಿ ಸಂಖ್ಯೆಗೆ ಸಾರ್ವಜನಿಕರು ಮಾಹಿತಿ ನೀಡಬಹುದಾಗಿದೆ.

ಮಾಹಿತಿಯನ್ನು ನೀಡಿರುವಂತಹ ವ್ಯಕ್ತಿಗಳ ವಿವರವನ್ನು ಗೌಪ್ಯವಾಗಿಡಲಾಗುತ್ತದೆ. ಸರ್ಕಾರದಿಂದ ದೊರೆಯುವಂತಹ ರಹಸ್ಯ ಸೇವಾನಿಧಿಯನ್ನು ಸಹ ಗೌಪ್ಯತೆಯ ಮೂಲಕ ಪಾವತಿಸಲಾಗುತ್ತದೆ. ಸಾರ್ವಜನಿಕರು ಈ ಕುರಿತು ಸಹಕರಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.