ಜಿಲ್ಲೆ

ಅಫಜಲಪುರದಲ್ಲಿ ಸಿದ್ಧಲಿಂಗ ಮಹಾರಾಜರ ಪುರಾಣ

ಅಫಜಲಪುರ: ಪುರಾಣ ಪುಣ್ಯ ಕಥೆಗಳಿಂದ ಗ್ರಾಮಗಳಲ್ಲಿ ಸಾಮರಸ್ಯ ಮೂಡುತ್ತದೆ ಎಂದು ಶ್ರೀ ವಿಶ್ವಾರಾಧ್ಯ ಮಳೆಂದ್ರ ಶಿವಾಚಾರ್ಯರು ಹೇಳಿದರು.

ಶ್ರೀ ಗುರು ಮಳೆಯಿಂದ ಶಿವಾಚಾರ್ಯರ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಲಚ್ಚಾಣ ಶ್ರೀ ಸಿದ್ಧಲಿಂಗ ಮಹಾರಾಜರ ಪುರಾಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪವಾಡ ಪುರುಷ ಲಚ್ಚಾಣ ಸಿದ್ದಲಿಂಗ ಮಹಾರಾಜರು ಭಕ್ತರ ಆರಾಧ್ಯ ದೈವವಾಗಿ, ಈ ಭಾಗದಲ್ಲಿ ಪುಣ್ಯ ಪುರುಷರಾಗಿ ಮೆರೆದಿದ್ದಾರೆ. ಅಂಥವರ ಪುರಾಣವನ್ನು ಕೇಳುವ ಅವಕಾಶ ನಿಮಗೆ ಸಿಕ್ಕಿದ್ದು ಪುಣ್ಯ ಎಂದು ಹೇಳಿದರು.

ಆ.17ರಿಂದ ಸೆ.18ರವರೆಗೆ ಒಂದು ತಿಂಗಳ ಪರಿಯಂತ ಪ್ರತಿದಿನ ಸಾಯಂಕಾಲ ಪುರಾಣ ಕಾರ್ಯಕ್ರಮ ಜರಗಲಿದೆ. ಮಡಿವಾಳಯ್ಯ ಶಾಸ್ತಿç ಜೇರಟಗಿ ಪುರಾಣಿಕರಾಗಿ, ಯಶವಂತ ಬಡಿಗೇರ ಸಿಂದಗಿ ಸಂಗೀತ, ರಾಜಶೇಖರ ಕಟ್ಟಿಸಂಗಾವಿ ತಬಲಾ ಸಾಥ್ ನೀಡುವರು ಎಂದರು.
ತಾಲೂಕು ವೀರಶೈವ ಸಮಾಜದ ಅಧ್ಯಕ್ಷ್ಯ ಚಂದ್ರಶೇಖರ ಕರಜಗಿ, ಮಾಜಿ ಅಧ್ಯಕ್ಷ್ಯ ಶಿವಪುತ್ರಪ್ಪ ಸಂಗೋಳಗಿ ಇತರರಿದ್ದರು.