ಜಿಲ್ಲೆ

ಅಪ್ರಾಪ್ತೆಯನ್ನು ವರಿಸಿದವನ ವಿರುದ್ಧ ಪ್ರಕರಣ

ಚಿತ್ರದುರ್ಗ: ತಾಲೂಕಿನ ಗ್ರಾಮವೊಂದರ ಬಾಲ್ಯ ವಿವಾಹ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ. ಹಿರಿಯೂರು ತಾಲೂಕು ಯಲ್ಲಕರನಹಳ್ಳಿ ಹರೀಶ್, ಚಳ್ಳಕೆರೆ ತಾಲೂಕು ವ್ಯಾಪ್ತಿಯ ಗ್ರಾಮದವೊಂದರ ಅಪ್ರಾಪ್ತಳನ್ನು ವಿವಾಹವಾಗಿದ್ದ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಪ್ರಕರಣ ಪರಿಶೀಲಿಸಿ, ಚಳ್ಳಕೆರೆ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ವರದಿ ಕಳುಹಿಸಿದ್ದರು. ಇದನ್ನಾಧರಿಸಿ ಜುಲೈ 29ರಂದು ಹರೀಶ್ ವಿರುದ್ಧ ಚಳ್ಳಕೆರೆ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕರಣ ದಾಖಲಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್ ತಿಳಿಸಿದ್ದಾರೆ.