ಜಿಲ್ಲೆ

ಅಪ್ರಾಪ್ತೆಯನ್ನು ಬೇರೆಡೆ ಇರಿಸಿದ್ದವನ ಬಂಧನ

ಹನೂರು: ತಾಲೂಕಿನ ಗ್ರಾಮವೊಂದರ ವ್ಯಕ್ತಿಯೊಬ್ಬನಿಗೆ ಪತ್ನಿ, ಮಗು ಇದ್ದರೂ 16 ವರ್ಷದ ಅಪ್ರಾಪ್ತೆಯನ್ನು ಬೇರೆಡೆ ಇರಿಸಿದ್ದ ಹಿನ್ನೆಲೆಯಲ್ಲಿ ಬುಧವಾರ ಮಹದೇಶ್ವರ ಬೆಟ್ಟ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಮ.ಬೆಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ 32 ವರ್ಷದ ವ್ಯಕ್ತಿಯೊಬ್ಬನಿಗೆ ಹೆಂಡತಿ ಹಾಗೂ 4 ವರ್ಷದ ಮಗು ಇದೆ. ಆದರೆ ಈತ 16 ವರ್ಷದ ಅಪ್ರಾಪ್ತೆಯನ್ನು ಪುಸುಲಾಯಿಸಿ ಬೇರೆ ತಾಲೂಕಿನ ಮನೆಯೊಂದರಲ್ಲಿ ಇರಿಸಿದ್ದನು. ಈ ಸಂಬಂಧ ಅಪ್ರಾಪ್ತೆಯ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಅಪ್ರಾಪ್ತೆಯನ್ನು ತಾಯಿಯ ವಶಕ್ಕೆ ನೀಡಲಾಗಿದೆ.