ಜಿಲ್ಲೆ

ಅಪ್ರಾಪ್ತೆಗೆ ಕಿರುಕುಳ ನೀಡಿದ ಪೊಲೀಸ್ ಕಾನ್ ಸ್ಟೇಬಲ್ ಅರೆಸ್ಟ್

ಮಂಗಳೂರು: ಅಪ್ರಾಪ್ತೆಗೆ ಕಿರುಕುಳ ನೀಡಿದ ಆರೋಪದಲ್ಲಿ ನಗರದ. ಕಂಕನಾಡಿ ನಗರ ಠಾಣೆಯ ಪೊಲೀಸ್ ಕಾನ್ ಸ್ಟೇಬಲ್ ನನ್ನು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೂರು ನೀಡಲು ಠಾಣೆಗೆ ಹೋಗಿದ್ದಾಗ ಕಾನ್ ಸ್ಟೇಬಲ್ ಆಕೆಯ ಮೊಬೈಲ್ ನಂಬರ್ ಪಡೆದು ಬಳಿಕ ಮೆಸೇಜ್ ಮಾಡಲಾರಂಭಿಸಿದ್ದ. ಬಳಿಕ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡಿದ್ದಾನೆ. ಈ ಬಗ್ಗೆ ಮಹಿಳಾ ಠಾಣೆಯಲ್ಲಿ ಆತನ ವಿರುದ್ದ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.