ಜಿಲ್ಲೆ

ಅಪ್ರಾಪ್ತನಿಗೆ ಬೈಕ್​ ನೀಡಿದ ತಂದೆಗೆ 10 ಸಾವಿರ ದಂಡ

ತುಮಕೂರು ಡೆಸ್ಕ್

ತಿಪಟೂರು: ಅಪ್ರಾಪ್ತ ಪುತ್ರನಿಗೆ ಬೈಕ್​ ಚಲಾಯಿಸಲು ಕೊಟ್ಟ ಪಾಲಕರಿಗೆ ನಗರದ ಎಸ್​ಸಿಜೆ ಜೆಎಂಎಫ್​ಸಿ ನ್ಯಾಯಾಲಯ 10 ಸಾವಿರ ರೂಪಾಯಿ ದಂಡ ವಿಧಿಸಿದೆ. ಜು.1ರಂದು ನಗರಠಾಣೆಯ ಎಸ್​ಐ ಕೃಷ್ಣಪ್ಪ ಅವರು ವಾಹನಗಳ ತಪಾಸಣೆ ಮಾಡುವ ಸಂದರ್ಭ ನಗರದ ಖಾಸಗಿ ಶಾಲೆಯ ವಿದ್ಯಾರ್ಥಿ ಬೈಕ್​ ಚಲಾಯಿಸುತ್ತಿರುವುದನ್ನು ಗಮನಿಸಿ ಬೈಕ್​ ಚಲಾಯಿಸಲು ಕೊಟ್ಟಿದ್ದ ವಿದ್ಯಾರ್ಥಿಯ ತಂದೆ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಶನಿವಾರ ತೀರ್ಪು ಪ್ರಕಟಿಸಿದ ನ್ಯಾಯಾಲಯ,10 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.