ಸೈಕಲ್ ಯಾತ್ರೆಯ ಮೂಲಕ ಹನೂರಿಗೆ ಆಗಮಿಸಿದ ಅಪ್ಪು ಅಭಿಮಾನಿಯಾದ ತಮಿಳುನಾಡಿನ ಮುತ್ತು ಸೆಲ್ವನ್ ಅವರನ್ನು ತಹಸೀಲ್ದಾರ್ ಗುರುಪ್ರಸಾದ್ ಹಾಗೂ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ತಿಕ್, ಲೋಕೇಶ್, ಸಿದ್ದರಾಜು ಇತರರು ಇದ್ದರು. 
ಜಿಲ್ಲೆ

ಅಪ್ಪು ಅಭಿಮಾನಿಯಿಂದ ಸೈಕಲ್ ಯಾತ್ರೆ

ಹನೂರು: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪೊಳ್ಳಾಚಿ ಗ್ರಾಮದ ಅಪ್ಪು ಅಭಿಮಾನಿ 26 ವರ್ಷದ ಮುತ್ತುಸೆಲ್ವನ್ ಎಂಬುವವರು ದೇಶಾದ್ಯಂತ ಸೈಕಲ್ ಯಾತ್ರೆ ಕೈಗೊಂಡಿದ್ದು, ಶನಿವಾರ ರಾತ್ರಿ ಹನೂರಿಗೆ ಆಗಮಿಸಿದ ವೇಳೆ ತಹಸೀಲ್ದಾರ್ ಗುರುಪ್ರಸಾದ್ ಹಾಗೂ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಮುತ್ತುಸೆಲ್ವನ್ ಮಾತನಾಡಿ, ನಾನು ನಟ ಪುನೀತ್ ರಾಜ್‌ಕುಮಾರ್ ಅಭಿಮಾನಿಯಾಗಿದ್ದು, ಇವರ ವ್ಯಕ್ತಿತ್ವದ ಬಗ್ಗೆ ತಿಳಿಸುವುದರ ಜತೆಗೆ ಭಾರತದ ಎಲ್ಲ ನದಿಗಳನ್ನು ಜೋಡಿಸಿ ದೇಶದ ಎಲ್ಲರನ್ನು ಭಾರತೀತರನ್ನಾಗಿ ನೋಡಿ ಎಂಬ ಬಗ್ಗೆ ಸಂದೇಶ ಸಾರುವ ನಿಟ್ಟಿನಲ್ಲಿ 2021 ಡಿ.21ರಂದು ಗ್ರಾಮದಿಂದ ಸೈಕಲ್ ಯಾತ್ರೆಯನ್ನು ಆರಂಭಿಸಿದ್ದೇನೆ. ದೇಶಾದ್ಯಂತ 3 ವರ್ಷ ಸವಾರಿ ಮಾಡಲಿದ್ದೇನೆ. ಒಟ್ಟು 34,300 ಕಿ.ಮೀ. ಸೈಕಲ್ ಯಾತ್ರೆ ಕೈಗೊಳ್ಳಲಾಗುವುದು ಎಂದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಕಾರ್ತಿಕ್, ಲೋಕೇಶ್, ಸಿದ್ದರಾಜು, ಪೊಲೀಸ್ ಪೇದೆ ರಾಮದಾಸ್, ಮುಖಂಡರಾದ ಪುಟ್ಟರಾಜು, ರಮೇಶ್‌ನಾಯ್ಡು, ಬಸವರಾಜು, ಶ್ರೀನಿವಾಸ್‌ನಾಯ್ಡು, ವಿನೋದ್, ಶಿವು ಇತರರು ಇದ್ದರು.