ಜಿಲ್ಲೆ

ಅಪ್ಪನ ಕೆರೆ ಉದ್ಯಾನ ವೀಕ್ಷಿಸಿದ ಡಿಸಿ

ಕಲಬುರಗಿ: ನಗರದ ಐತಿಹಾಸಿಕ ಶ್ರೀ ಶರಣಬಸವೇಶ್ವರ ಕೆರೆ (ಅಪ್ಪನ ಕೆರೆಯಲ್ಲಿ) ನಡೆಯುತ್ತಿರುವ ಕಾಮಗಾರಿಯನ್ನು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಪರಿಶೀಲಿಸಿದರು. ಕೆರೆಯ ಉದ್ಯಾನ ಹಲವು ವರ್ಷಗಳಿಂದ ಬಂದ್​ ಬಿದ್ದು, ಪಾಳು ಬಿದ್ದಿದ್ದು, ಸಾರ್ವಜನಿಕರಿಗೆ ಉಪಯೋಗಕ್ಕೆ ಇಲ್ಲದಂತಾಗಿತ್ತು. ಇದೀಗ ಉದ್ಯಾನ ನವೀಕರಣ ಕೆಲಸ ಆರಂಭವಾಗಿದ್ದು, ಅದನ್ನು ಜಿಲ್ಲಾಧಿಕಾರಿ ವೀಕ್ಷಿಸಿದರು. ಅಲ್ಲದೇ ನಿಯಮ ಬಾಹಿರವಾಗಿ ನಿರ್ಮಿಸುತ್ತಿರುವ ಅಭಿವೃದ್ಧಿ ಕೆಲಸ ಸ್ಥಗಿತಗೊಂಡಿರುವುದು ಪರಿಶೀಲಿಸಿದರು. ಪಾಲಿಕೆ ಆಯುಕ್ತ ಭುವನೇಶ ಪಾಟೀಲ್, ಆರ್.ಪಿ.ಜಾಧವ್, ಶಿವನಗೌಡ ಪಾಟೀಲ್ ಇತರರಿದ್ದರು.