ಭಾಲ್ಕಿ: ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ ಅವರು ಶ್ರೇಷ್ಠ ವಚನಕಾರರು ಆಗಿದ್ದರು. ಅವರ ವಿಚಾರಧಾರೆಗಳು ಸಮಾಜಕ್ಕೆ ಮಾದರಿಯಾಗಿವೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಆಯೋಜಿಸಿದ್ದ ೪೮೯ನೆಯ ಶಿವಾನುಭವ ಗೋಷ್ಠಿ ಮತ್ತು ಹಡಪದ ಅಪ್ಪಣ್ಣ-ಲಿಂಗಮ್ಮನವರ ಜಯಂತಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ಮಾತನಾಡಿದ ಶ್ರೀಗಳು, ಈ ಶರಣರ ವಚನಗಳು ಮಾನವೀಯತೆ, ಕಾಯಕ ನಿಷ್ಠೆ, ದಾಸೋಹ ಮತ್ತು ಮೂಢನಂಬಿಕೆಗಳ ಬಗ್ಗೆ ಬೆಳಕು ಚೆಲ್ಲುತ್ತವೆ ಎಂದು ತಿಳಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶಂಭುಲಿಂಗ ಕಾಮಣ್ಣ ಅನುಭಾವ ನೀಡಿದರು. ನೀಲಾಂಬಿಕಾ ಪ್ರಕಾಶ ಹಡಪದ ಬಸವ ಗುರುವಿನ ಪೂಜೆ ನೆರವೇರಿಸಿದರು. ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿದ್ದರು.
ತಾಲೂಕು ವಚನ ಸಾಹಿತ್ಯ ಪರಿಷತ್ತು ಅಧ್ಯಕ್ಷ ಗುಂಡಪ್ಪ ಸಂಗಮಕರ್, ನ್ಯಾಯವಾದಿ ರಮೇಶ ಕುರುಬಖೇಳಗಿ, ನಿವೃತ್ತ ಶಿಕ್ಷಕ ಬಸವರಾಜ ಹಡಪದ ಇತರರಿದ್ದರು. ಸಂತೋಷ ಹಡಪದ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಣೆ ಮಾಡಿ ವಂದಿಸಿದರು.
ಸನ್ಮಾನ : ತಾಲೂಕಿನ ಬಾಜೋಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶರಣಪ್ಪ ಬಿರಾದಾರ್ ದಂಪತಿಗಳನ್ನು ಶ್ರೀಮಠದ ಪರವಾಗಿ ಉಭಯ ಪೂಜ್ಯರು ಸನ್ಮಾನಿಸಿ, ಆಶೀರ್ವದಿಸಿದರು.
ಹಡಪದ ಅಪ್ಪಣ್ಣನವರು ಶಿವಶರಣರಾಗಿದ್ದು, ಅವರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದರು ಮತ್ತು ಅವರ ಧರ್ಮಪತ್ನಿ ಲಿಂಗಮ್ಮನವರು ಕೂಡ ಶ್ರೇಷ್ಠ ವಚನಗಾರ್ತಿಯಾಗಿದ್ದರು.
| ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ