ಯಾದಗಿರಿ: ಇಲ್ಲಿನ ಹಳೆ ಬಸ್ ನಿಲ್ದಾಣದ ಎದುರುಗಡೆ ರಾಜ್ಯ ಹೆದ್ದಾರಿಗೆ ಅಂಟಿಕೊಂಡಿರುವ ಚರಂಡಿ ಕಾಮಗಾರಿ ಆರಂಭಗೊಂಡು 4 ತಿಂಗಳು ಕಳೆದರೂ ಕೆಲಸ ಪೂರ್ಣಗೊಳ್ಳದ ಕಾರಣ ಪಾದಾಚಾರಿಗಳು ನಿತ್ಯ ಆತಂಕದಲ್ಲಿ ಸಂಚರಿಸುವಂತಾಗಿದೆ.
ನಗರಸಭೆಯ ನಗರೋತ್ಥಾನ ಯೋಜನೆಯಡಿ ಕಳೆದ 4 ತಿಂಗಳ ಹಿಂದೆ ಸಿಸಿ ರಸ್ತೆ ನಿಮರ್ಾಣ ಕಾಮಗಾರಿ ಆರಂಭಿಸಿತ್ತು. ಇದು ಟೆಂಡರ್ ಸಹ ಆಗಿದ್ದು, ವಿಧಾನಸಭೆಗೆ ಚುನಾವಣೆ ಎದುರಾದ ಕಾರಣ ಚರಂಡಿಯನ್ನು ಅಗೆದು ಅಷ್ಟಕ್ಕೆ ನಿಲ್ಲಿಸಲಾಗಿದೆ. ಇದರಿಂದ ಬೃಹದಾಕಾರದ ಹೊಂಡ ನಿಮರ್ಾಣಗೊಂಡಿದ್ದು ಆಳೆತ್ತರದ ಕೊಳಚೆ ನೀರು ಸಂಗ್ರಹಗೊಂಡು ಸುತ್ತಮುತ್ತಲಿನ ಪ್ರದೇಶದಲ್ಲಿ ದುನರ್ಾತ ಬೀರುತ್ತಿದೆ.
ಇಲ್ಲಿ ಹಳೆ ಬಸ್ನಿಲ್ದಾಣ ಹಾಗೂ ಪಕ್ಕದಲ್ಲೇ ರೈಲ್ವೆ ನಿಲ್ದಾಣ ಸಹ ಇರುವುದರಿಂದ ನಿತ್ಯ ಸಾವಿರಾರು ಜನ ಸೇರುತ್ತಾರೆ. ಅಲ್ಲದೆ, ಹೊಟೆಲ್, ಹಣ್ಣಿನ ಅಂಗಡಿಗಳು ಇರುವುದರಿಂದ ಸದಾ ಜನದಟ್ಟಣೆ ಇರುತ್ತದೆ. ಇನ್ನೂ ಹಳೆ ಪ್ರವಾಸಿ ಮಂದಿರ ಹಾಗೂ ಪಕ್ಕದಲ್ಲೇ ಜಿಲ್ಲಾಡಳಿತ ಭವನಕ್ಕೆ ತೆರಳುವ ರಸ್ತೆ ಇರುವ ಕಾರಣ ವ್ಯಾಪಾರ, ವಹಿವಾಟು ಹೆಚ್ಚಾಗಿ ನಡೆಯುತ್ತದೆ. ಆದರೆ ಚರಂಡಿ ನಿಮರ್ಾಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ನಗರಸಭೆ ಮುಂದಾಗುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಇನ್ನೂ ಮಳೆಗಾರ ಆರಂಭಗೊಂಡ ಕಾರಣ ನೀರು ಸಂಗ್ರಹಗೊಂಡರೆ, ಮತ್ತಷ್ಟು ತೊಂದರೆಯಾಗಲಿದೆ. ಪುಟ್ಟ ಮಕ್ಕಳು ವೃದ್ಧರು ಸದಾ ಇಲ್ಲಿ ಸಂಚರಿಸುತ್ತಾರೆ.
ಈ ಚರಂಡಿ ಪಕ್ಕದಲ್ಲೇ ವಿದ್ಯುತ್ ಕಂಬ ಬಾಗಿದ್ದು, ಯಾವ ಕ್ಷಣದಲ್ಲಾದರೂ ನೆಲಕ್ಕುರುಳಿ ಆನಾಹುತ ಸಂಭವಿಸಬಹುದು. ಕೊಳಚೆ ನೀರಿನಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದ್ದು, ಕೂಡಲೇ ಕಾಮಗಾರಿ ಆರಂಭಿಸುವಂತೆ ಸುತ್ತಮುತ್ತಲಿನ ವ್ಯಾಪಾರಸ್ಥರು ಒತ್ತಾಯಿಸಿದ್ದಾರೆ.