ಜಿಲ್ಲೆ

ಅಪಾರ ಭಕ್ತರ ಮಧ್ಯೆ ಜರುಗಿದ ಯಲ್ಲಮ್ಮ ದೇವಿ ರಥೋತ್ಸವ

ಯಾದಗಿರಿ: ವಡಿಗೇರಾ ತಾಲೂಕಿನ ಹಾಲಗೇರಾ ಗ್ರಾಮದ ಆರಾಧ್ಯ ದೈವ ಶ್ರೀ ಯಲ್ಲಮ್ಮ ದೇವಿ ರಥೋತ್ಸವ ಭಾನುವಾರ ಅಪಾರ ಭಕ್ತಗಣದ ಮಧ್ಯೆ ಭವ್ಯವಾಗಿ ಜರುಗಿತು.

ಪಲ್ಲಕ್ಕಿಯಲ್ಲಿ ಯಲ್ಲಮ್ಮದೇವಿ ಉತ್ಸವ ಮೂತರ್ಿಯ ಗಂಗಾಸ್ನಾನ, ನಂತರ ಪ್ರತಿಷ್ಠಾಪನಾ ಮೂತರ್ಿಗೆ ಪೂಜೆ ಜರುಗಿತು. ನಂತರ ಸಾವಿರಾರು ಭಕ್ತರ ಜಯಘೋಷದ ನಡುವೆ ಅದ್ದೂರಿ ಉಚ್ಛಾಯಿ ಉತ್ಸವ ನಡೆಯಿತು. ವಡಿಗೇರಾ ಸೇರಿದಂತೆ ಸುತ್ತಮುತ್ತಲಿನ ನೂರಾರು ಹಳ್ಳಿಗಳಿಂದ ಭಕ್ತ ಸಮೂಹ ತಂಡೋಪತಂಡವಾಗಿ ಹಾಲಗೇರಾ ಗ್ರಾಮಕ್ಕೆ ಆಗಮಿಸಿತು.

ದೇವಸ್ಥಾನದ ಆವರಣದಲ್ಲಿ ಖಾಸಗಿ ವಾಹನಗಳ ಪಾಕರ್ಿಂಗ್ ಮಾಡಲು ಕೆಲ ಗಂಟೆಗಳ ಹರಸಾಹಸ ಪಡುವಂತಾಯಿತು.ಸರಿಯಾಗಿ ಸಂಜೆ 6 ಗಂಟೆಗೆ ರಥೋತ್ಸವ ಚಾಲನೆ ದೊರೆಯಿತು. ಭಕ್ತವೃಂದ ಮುಗಿಲು ಮುಟ್ಟವ ಜಯಘೋಷ ಮಾಡುತ್ತಾ ರಥವನ್ನು ಎಳೆದು ಸಂಭ್ರಮಿಸಿದರು.

ತೇರಿನ ಉತ್ಸವ ಮುಗಿಯುತ್ತಲೇ ಆಗಮಿಸಿದ ಭಕ್ತರ ದಂಡು ತಮ್ಮ ಉಪವಾಸ ವೃತವನ್ನು ಮುಗಿಸಿ, ಜಾತ್ರೆಯಲ್ಲಿ ಫಳಾರ ಖರೀದಿಸಲು ಮುಗಿಬಿದ್ದಿದ್ದರು. ಬೆಂಡು, ಬತಾಸ್ಗಳನ್ನು ಕೊಳ್ಳುವವರ ಭರಾಟೆಯಂತೂ ಹೇಳತೀರದಾಗಿತ್ತು. ಚಿಕ್ಕ-ಚಿಕ್ಕ ಮಕ್ಕಳು ತಮಗೆ ಅಕ್ಕರೆ ಎನಿಸಿದ ಕೊಳಲು, ಪೀಪಿ, ಮುಂತಾದ ಆಟಿಕೆ ಸಾಮಾನುಗಳನ್ನು ಕೊಂಡು ಸಂಭ್ರಮಿಸಿದರು.