ಜಿಲ್ಲೆ

ಅಪಾಯದಂಚಿನಲ್ಲಿ ಛೋಟಾ ಮುಂಬೈ!

ಧಾರವಾಡ: ಜಿಲ್ಲೆಯಲ್ಲಿ ಮಂಗಳವಾರ 57 ಜನರಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 668ಕ್ಕೆ ಏರಿಕೆಯಾಗಿದೆ. ಮತ್ತೋರ್ವ ಮೃತಪಟ್ಟಿದ್ದು, ಕರೊನಾಕ್ಕೆ ಬಲಿಯಾದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

ಹುಬ್ಬಳ್ಳಿ ಶಹರದಲ್ಲಿ ಅತಿಹೆಚ್ಚು ಪ್ರಕರಣ ದಾಖಲಾಗಿದ್ದು, ಎಲ್ಲ ದಿಕ್ಕುಗಳಿಗೂ ವ್ಯಾಪಿಸುತ್ತಿದೆ. ಇದು, ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿ ನಗರದ ಜನ ದೊಡ್ಡ ಅಪಾಯದ ಅಂಚಿನಲ್ಲಿರುವುದರ ಸಂಕೇತ ಎಂದೇ ರ್ತಸಲಾಗುತ್ತಿದೆ.

ಮಂಗಳವಾರ ಪತ್ತೆಯಾದ ಪ್ರಕರಣಗಳ ಸ್ಥೂಲ ಮಾಹಿತಿ ಈ ಮುಂದಿನಂತಿದೆ.

ಹುಬ್ಬಳ್ಳಿ ತಾಲೂಕು:

ಜು. 2ರಂದು ಸೋಂಕು ದೃಢಪಟ್ಟ ಹುಬ್ಬಳ್ಳಿ ಗುರುಸಿದ್ಧೇಶ್ವರ ನಗರದ 38 ವರ್ಷದ ಪುರುಷನಿಂದ ಅದೇ ಪ್ರದೇಶದ 30 ವರ್ಷದ ಮಹಿಳೆ, 2 ವರ್ಷದ ಬಾಲಕ, 11 ವರ್ಷ ಬಾಲಕಿ, ಜು. 5ರಂದು ಸೋಂಕು ತಗುಲಿದ್ದ ಮೆಹಬೂಬ ನಗರದ 53 ವರ್ಷದ ಮಹಿಳೆಯಿಂದ ಅದೇ ಪ್ರದೇಶದ 20 ವರ್ಷದ ಪುರುಷ, ಜು. 4ರಂದು ಸೋಂಕು ಕಾಣಿಸಿಕೊಂಡ ಹುಬ್ಬಳ್ಳಿ ಬಿಡನಾಳ ಮಾರುತಿ ನಗರದ 56 ವರ್ಷದ ಮಹಿಳೆಯಿಂದ ಅದೇ ಪ್ರದೇಶದ 52 ವರ್ಷದ ಪುರುಷ, ಜು. 5ರಂದು ಸೋಂಕು ಕಾಣಿಸಿಕೊಂಡು ಮೃತಪಟ್ಟಿರುವ ಗುರುನಾಥ ನಗರದ 67 ವರ್ಷದ ಮಹಿಳೆಯಿಂದ ಅದೇ ಪ್ರದೇಶದ 42 ವರ್ಷದ ಪುರುಷ, ಜು. 5ರಂದು ಸೋಂಕು ಕಾಣಿಸಿಕೊಂಡ ಧಾರವಾಡ ಅರಣ್ಯ ಇಲಾಖೆ ವಸತಿಗೃಹದ 64 ವರ್ಷದ ಮಹಿಳೆಯಿಂದ ಹುಬ್ಬಳ್ಳಿ ಸದಾಶಿವ ನಗರದ 43 ವರ್ಷದ ಪುರುಷನಿಗೆ, ಜೂ. 29ರಂದು ಸೋಂಕು ಕಾಣಿಸಿಕೊಂಡ ಹುಬ್ಬಳ್ಳಿ ಸದಾಶಿವ ನಗರ ಬಾಣತಿಕಟ್ಟಾದ 42 ವರ್ಷದ ಪುರುಷನಿಂದ ಅದೇ ಪ್ರದೇಶದ 11 ವರ್ಷ ಹಾಗೂ 10 ವರ್ಷದ ಬಾಲಕಿಯರಿಗೆ ಸೋಂಕು ಕಾಣಿಸಿಕೊಂಡಿದೆ.

ಕೆಮ್ಮು, ನೆಗಡಿ, ತೀವ್ರ ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಹಳೇಹುಬ್ಬಳ್ಳಿಯ 34 ವರ್ಷದ ಪುರುಷ, ಮಿಲ್ಲತ್​ನಗರದ 52 ವರ್ಷದ ಮಹಿಳೆ, ಗದಗ ರಸ್ತೆ ಶಾಲಿನಿ ಪಾರ್ಕ್​ನ 68 ವರ್ಷದ ಪುರುಷ, ಉಣಕಲ್​ನ 64 ವರ್ಷದ ಪುರುಷ, ಕಲ್ಯಾಣ ನಗರದ 64 ವರ್ಷದ ಪುರುಷ, ದೇಶಪಾಂಡೆ ನಗರದ 24 ವರ್ಷದ ಪುರುಷ, ನಾಗಶೆಟ್ಟಿಕೊಪ್ಪದ 34 ವರ್ಷದ ಪುರುಷ, ವಿದ್ಯಾನಗರದ 26 ವರ್ಷದ ಪುರುಷ, ನೀಲಿಜಿನ್ ರಸ್ತೆಯ 62 ವರ್ಷದ ಪುರುಷ, ಹಳೇಹುಬ್ಬಳ್ಳಿ ಆನಂದ ನಗರದ 47 ವರ್ಷದ ಮಹಿಳೆ, 54 ವರ್ಷದ ಪುರುಷ, ದೇಶಪಾಂಡೆ ನಗರದ 60 ವರ್ಷದ ಪುರುಷ, ಕೇಶ್ವಾಪುರದ 42 ವರ್ಷದ ಪುರುಷ, 24 ವರ್ಷದ ಪುರುಷ, ಚೇತನಾ ಕಾಲನಿಯ 67 ವರ್ಷದ ಮಹಿಳೆ, ಶಿರೂರ ಪಾರ್ಕ್​ನ 58 ವರ್ಷದ ಮಹಿಳೆ, ಗೌಸಿಯಾ ನಗರದ 33 ವರ್ಷದ ಪುರುಷ, ಪೊಲೀಸ್ ಕ್ವಾರ್ಟರ್ಸ್ 39 ವರ್ಷದ ಪುರುಷ, ಈಶ್ವರ ನಗರದ 60 ವರ್ಷದ ಪುರುಷ, ಗೋಪನಕೊಪ್ಪದ 55 ವರ್ಷದ ಮಹಿಳೆ, ಹುಬ್ಬಳ್ಳಿ ತಾಲೂಕು ನಾಗರಳ್ಳಿಯ 52 ವರ್ಷದ ಮಹಿಳೆ, ಸುಳ್ಳ ಗ್ರಾಮದ 35 ವರ್ಷದ ಪುರುಷನಿಗೆ ಸೋಂಕು ತಗುಲಿದೆ.

ಹುಬ್ಬಳ್ಳಿ ಉಣಕಲ್ ತಾಜ್ ನಗರದ 3 ವರ್ಷದ ಬಾಲಕಿ, ಬ್ಯಾಳಿ ಓಣಿಯ ಶಂಕರಲಿಂಗ ದೇವಸ್ಥಾನ ಬಳಿಯ 30 ವರ್ಷದ ಮಹಿಳೆ, ಪೆಂಡಾರಗಲ್ಲಿಯ 30 ವರ್ಷದ ಮಹಿಳೆ, ಕಿಮ್್ಸ ಆವರಣದ 27 ವರ್ಷದ ಪುರುಷ, 22 ವರ್ಷದ ಪುರುಷ, 35 ವರ್ಷದ ಮಹಿಳೆ, ದೇಶಪಾಂಡೆ ನಗರದ 67 ವರ್ಷದ ಪುರುಷ, ಹಳೇಹುಬ್ಬಳ್ಳಿಯ 42 ವರ್ಷದ ಪುರುಷ, ಉಪನಗರ ಆರಕ್ಷಕ ಠಾಣೆ ಬಳಿಯ 49 ವರ್ಷದ ಪುರುಷನಿಗೆ ಸೋಂಕು ತಗುಲಿದ್ದು, ಅವರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಧಾರವಾಡ ತಾಲೂಕು: ಜು. 1ರಂದು ಸೋಂಕು ಕಾಣಿಸಿಕೊಂಡ ನವಲೂರ ಜನತಾ ಪ್ಲಾಟ್​ನ 7 ವರ್ಷದ ಬಾಲಕನಿಂದ ಅದೇ ಪ್ರದೇಶದ 26 ವರ್ಷದ ಮಹಿಳೆಗೆ; ಕೆಮ್ಮು-ನೆಗಡಿ, ತೀವ್ರ ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಧಾರವಾಡ ತಾಲೂಕು ಸೋಮಾಪುರದ 52 ವರ್ಷದ ಪುರುಷ, ಮದಿಹಾಳದ 55 ವರ್ಷದ ಮಹಿಳೆ; ಅಮ್ಮಿನಭಾವಿಯ 57 ವರ್ಷದ ಪುರುಷ, ಸತ್ತೂರಿನ 27 ವರ್ಷದ ಮಹಿಳೆಗೆ ಸೋಂಕು ಉಂಟಾಗಿದೆ.

ಇತರ ತಾಲೂಕು: ಜೂ. 15ರಂದು ಸೋಂಕು ತಗುಲಿದ್ದ ಅಣ್ಣಿಗೇರಿ ತಾಲೂಕು ಸಾಸ್ವಿಹಳ್ಳಿಯ 50 ವರ್ಷದ ಪುರುಷನಿಂದ ನವಲಗುಂದದ 67 ವರ್ಷದ ಪುರುಷನಿಗೆ; ಕೆಮ್ಮು-ನೆಗಡಿ, ತೀವ್ರ ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಕುಂದಗೋಳ ತಾಲೂಕು ಹಂಚಿನಾಳದ 23 ವರ್ಷದ ಪುರುಷನಲ್ಲಿ ಕರೊನಾ ದೃಢಪಟ್ಟಿದೆ.

ಇತರ ಜಿಲ್ಲೆ: ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕು ತುಂಗಭದ್ರಾ ಡ್ಯಾಂನ 40 ವರ್ಷದ ಪುರುಷ, ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕು ಕಿರವತ್ತಿಯ 38 ವರ್ಷದ ಪುರುಷ, ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕು ಹೊಸೂರಿನ 18 ವರ್ಷದ ಮಹಿಳೆ, ಬಾಗಲಕೋಟೆ ಜಿಲ್ಲೆ ಚಿಮ್ಮಡದ 58 ವರ್ಷದ ಪುರುಷ, ಮುಧೋಳ ತಾಲೂಕು ಮಹಾಲಿಂಗಪುರದ 45 ವರ್ಷದ ಪುರುಷ; ಹಾವೇರಿ ಜಿಲ್ಲೆಯ ಶಿಗ್ಗಾಂವಿಯ 32 ವರ್ಷದ ಮಹಿಳೆ, ಸವದತ್ತಿ ತಾಲೂಕು ಮುನವಳ್ಳಿಯ 42 ವರ್ಷದ ಪುರುಷ; ಬೆಂಗಳೂರು ನಾಗರಬಾವಿಯ 32 ವರ್ಷದ ಪುರುಷ ಹಾಗೂ ಕೇರಳದಿಂದ ಆಗಮಿಸಿದ ಕಿಮ್್ಸ ಕ್ಯಾಂಪಸ್​ನ 27 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

ತಾಲೂಕು ಪ್ರಕರಣ ಸಂಖ್ಯೆ

ಹುಬ್ಬಳ್ಳಿ 41

ಧಾರವಾಡ 5

ನವಲಗುಂದ 1

ಕುಂದಗೋಳ 1

ಕೋವಿಡ್​ಗೆ ಮತ್ತೋರ್ವ ಬಲಿ

ಧಾರವಾಡ: ಜಿಲ್ಲೆಯಲ್ಲಿ ಕರೊನಾದಿಂದ ಮತ್ತೋರ್ವ ಪುರುಷ ಮೃತಪಟ್ಟಿದ್ದಾನೆ. ಇದರಿಂದ ಜಿಲ್ಲೆಯಲ್ಲಿ ಮೃತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಕೆಮ್ಮು, ನೆಗಡಿ, ತೀವ್ರ ಜ್ವರದಿಂದ ಬಳಲುತ್ತಿದ್ದ ಧಾರವಾಡ ತಾಲೂಕು ಸೋಮಾಪುರ ಗ್ರಾಮದ 52 ವರ್ಷದ ಪುರುಷ ಮೃತಪಟ್ಟಿದ್ದಾನೆ. ಸೋಮವಾರ ವ್ಯಕ್ತಿಯು ಜಿಲ್ಲಾ ಆಸ್ಪತ್ರೆಗೆ ಬಂದು ಕರೊನಾ ಪರೀಕ್ಷೆ ಮಾಡಿಸಿಕೊಂಡು, ಮನೆಗೆ ಮರಳಿ ಕ್ವಾರಂಟೈನ್​ದಲ್ಲಿದ್ದನು. ಮಂಗಳವಾರ ಮೃತಪಟ್ಟಿದ್ದಾನೆ. ಆತನ ಗಂಟಲ ದ್ರವ ಪರೀಕ್ಷೆ ವರದಿ ಪಾಸಿಟಿವ್ ಬಂದಿದೆ. ವ್ಯಕ್ತಿಯು ಸೋಮಾಪುರದ ಮನೆಯಲ್ಲೇ ಮೃತಪಟ್ಟಿದ್ದಾನೆ. ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

ಸಂಚಾರ ಠಾಣೆ ಪೊಲೀಸ್​ಗೂ ಸೋಂಕು

ಹುಬ್ಬಳ್ಳಿ: ಕಳ್ಳತನ ಆರೋಪಿಯಿಂದ ಉಪನಗರ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಗೆ ಕರೊನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಇಲ್ಲಿನ ಉತ್ತರ ಸಂಚಾರ ಪೊಲೀಸ್ ಠಾಣೆ ಕಾನ್ಸ್​ಟೇಬಲ್ ಒಬ್ಬರಲ್ಲಿ ಮಂಗಳವಾರ ಸೋಂಕು ಪತ್ತೆಯಾಗಿದೆ. ಅವರೊಂದಿಗೆ ಕೆಲಸ ಮಾಡಿದವರು ಆತಂಕಗೊಂಡಿದ್ದಾರೆ.

ಕೇಶ್ವಾಪುರದ ಪೂರ್ವ ಸಂಚಾರ ಠಾಣೆಯ 39 ವರ್ಷದ ಕಾನ್ಸ್​ಟೇಬಲ್​ಗೆ ಜ್ವರ, ಮೈ ಕೈ ನೋವು ಕಾಣಿಸಿಕೊಂಡಿತ್ತು. ಹಾಗಾಗಿ, ಭಾನುವಾರ ಕಿಮ್ಸ್​ಗೆ ತೆರಳಿ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಿದ್ದರು. ಮಂಗಳವಾರ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕಿಮ್ಸ್​ಗೆ ದಾಖಲಿಸಲಾಗಿದೆ.

ಸೋಂಕು ಹೇಗೆ ಹಬ್ಬಿದೆ ಎಂಬುದು ಪತ್ತೆಯಾಗಿಲ್ಲ. ಸೋಂಕಿತ ಶನಿವಾರದವರೆಗೆ ಕರ್ತವ್ಯ ನಿರ್ವಹಿಸಿದ್ದು ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯಲ್ಲಿ ಆತಂಕ ಶುರುವಾಗಿದೆ. ಪ್ರಾಥಮಿಕ ಸಂಪರ್ಕಕ್ಕೆ ಬಂದ ಹಲವರನ್ನು ಹೋಮ್ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಧವೆಗೆ ವಂಚಿಸಿದ್ದ ಆರೋಪಿಗೆ ಕರೊನಾ !

ಡಿವೋರ್ಸ್ ಮ್ಯಾಟ್ರಿಮೋನಿಯಲ್ ಮೂಲಕ ಪರಿಚಯ ಮಾಡಿಕೊಂಡು ನಗರದ ವಿಧವೆಯೊಬ್ಬರಿಂದ ಲಕ್ಷಾಂತರ ರೂ. ನಗದು, ಚಿನ್ನ ಪಡೆದು ವಂಚಿಸಿದ್ದ ಬೆಂಗಳೂರು 33 ವರ್ಷದ ಮೂಲದ ಆರೋಪಿಗೂ ಮಂಗಳವಾರ ಕರೊನಾ ಪಾಸಿಟಿವ್ ಬಂದಿದೆ. ಆತನನ್ನು ಹಿಡಿದು ತಂದ ಪೊಲೀಸರಲ್ಲಿ ಕರೊನಾತಂಕ ಶುರುವಾಗಿದೆ.

ಡಿವೋರ್ಸ್ ಮ್ಯಾಟ್ರಿಮೋನಿಯಲ್ ಆಪ್ ಮೂಲಕ ಅಶೋಕ ನಗರದ ವಿಧವೆಯೊಬ್ಬರನ್ನು ಪರಿಚಯ ಮಾಡಿಕೊಂಡು ಮದುವೆಯಾಗುವುದಾಗಿ ನಂಬಿಸಿದ್ದ. ನಂತರ ವೈಯಕ್ತಿಕ ಸಮಸ್ಯೆ ನೆಪದಲ್ಲಿ 76 ಸಾವಿರ ರೂ. ನಗದು, 30 ಗ್ರಾಂ ಚಿನ್ನ ಹಾಗೂ 1 ಮೊಬೈಲ್ ಪಡೆದು ವಂಚಿಸಿದ್ದ. ಮಹಿಳೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪೊಲೀಸರು ಜೂನ್ 28ರಂದು ಬೆಂಗಳೂರಿನಿಂದ ಆರೋಪಿಯನ್ನು ವಶಕ್ಕೆ ಪಡೆದು ಗಂಟಲು ದ್ರವ ಪರೀಕ್ಷಿಸಿದ್ದರು. ಆಗ ವರದಿ ನೆಗೆಟಿವ್ ಬಂದಿತ್ತು. ಜುಲೈ 4ರಂದು ಮತ್ತೊಮ್ಮೆ ತಪಾಸಣೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ.

17 ಸಿಬ್ಬಂದಿ ಕ್ವಾರಂಟೈನ್

ಸೋಂಕಿತನ ಪ್ರಾಥಮಿಕ ಸಂಪರ್ಕ ಹೊಂದಿದ ಇನ್ಸ್​ಪೆಕ್ಟರ್ ರವಿಚಂದ್ರ ಸೇರಿ 15 ಸಿಬ್ಬಂದಿಯನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಇಬ್ಬರನ್ನು ಲಾಜ್ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಠಾಣೆಗೆ ಸ್ಯಾನಿಟೈಸೇಷನ್ ಮಾಡಲಾಗಿದ್ದು, ಪೊಲೀಸರು ಠಾಣೆ ಹೊರಗೆ ಟೇಬಲ್ ಹಾಕಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇತ್ತೀಚೆಗೆ ಉಪನಗರ ಠಾಣೆ ಪೊಲೀಸರು ಬಂದಿಸಿದ್ದ ಕಳ್ಳತನ ಆರೋಪಿಯಿಂದ ಇಬ್ಬರು ಪೊಲೀಸರಿಗೆ ಕರೊನಾ ಹರಡಿತ್ತು; ಈಗ ಅಶೋಕನಗರ ಠಾಣೆ ಸಿಬ್ಬಂದಿಯಲ್ಲೂ ಆತಂಕ ಮನೆ ಮಾಡಿದೆ.

ಕಿಮ್್ಸ ಸಿಬ್ಬಂದಿಗೆ ಸೋಂಕು

ಹುಬ್ಬಳ್ಳಿ: ಕಿಮ್ಸ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 3 ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಶುಶ್ರೂಷಕರೊಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಈ ಹಿಂದೆ ಒಬ್ಬ ವೈದ್ಯರು, ಒಬ್ಬ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿ, ಮೂವರು ಶುಶ್ರೂಷಕರಿಗೆ ಕರೊನಾ ಸೋಂಕು ತಗುಲಿತ್ತು. ಈಗ ಮತ್ತೆ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳ ವರದಿ ಪಾಸಿಟಿವ್ ಬಂದಿದೆ. ಇದರಿಂದ ಸಿಬ್ಬಂದಿಯಲ್ಲಿ ಮತ್ತಷ್ಟು ಆತಂಕ ಶುರುವಾಗಿದೆ.