ರವಿ ಬಿದನೂರು ಹೊಸನಗರ
ಮಳೆಗಾಲ ಬಂತೆಂದರೆ ಇಡೀ ಮಲೆನಾಡಿನ ಜಲಪಾತಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಈ ಪೈಕಿ ಯಡೂರಿನ ತಲಾಸಿ ಅಬ್ಬಿ ಫಾಲ್ಸ್ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಆದರೆ ಕಳೆದ ಮೂರು ವರ್ಷದಲ್ಲಿ ಸಂಭವಿಸಿರುವ ಮೂವರ ಸಾವಿನಿಂದ ಇದೀಗ ಪ್ರವೇಶ ನಿರ್ಬಂಧದ ಭೀತಿ ಎದುರಾಗಿದೆ.
ಹೊಸನಗರ ತಾಲೂಕಿನ ತಲಾಸಿ ಅಬ್ಬಿ ಫಾಲ್ಸ್ ಇರುವುದು ಸುಳುಗೋಡು ಗ್ರಾಪಂ ವ್ಯಾಪ್ತಿಯ ಗಿಣಿಕಲ್ ಗ್ರಾಮದಲ್ಲಿ. ಆದರೆ ಇದು ಯಡೂರು ತಲಾಸಿ ಅಬ್ಬಿ ಫಾಲ್ಸ್ ಎಂದೇ ಪ್ರಸಿದ್ಧಿ ಪಡೆದಿದೆ. ಕಾನನದ ಒಡಲಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಹೆಬ್ಬಂಡೆಗಳ ಮೇಲೆ ಹಂತಹಂತವಾಗಿ ಧುಮ್ಮಿಕ್ಕುವ ಈ ಜಲಧಾರೆ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಇದರಿಂದಾಗಿಯೇ ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರು ಇಲ್ಲಿಗೆ ಧಾವಿಸುತ್ತಾರೆ.
ಅಬ್ಬಿ ಜಲಧಾರೆಯ ಸೌಂದರ್ಯಕ್ಕೆ ಮನಸೋಲದವರಿಲ್ಲ. ಇದಕ್ಕೆ ಮರುಳಾಗಿ ಎಚ್ಚರ ತಪ್ಪಿದರೆ ಅರೆಕ್ಷಣದಲ್ಲಿ ಅಪಾಯವೂ ತಪ್ಪಿದ್ದಲ್ಲ. 2023ರ ಜೂ.23ರಂದು ವೀಕೆಂಡ್ ಪ್ರವಾಸಕ್ಕೆ ಬಂದ ಬೆಂಗಳೂರಿನ 12 ಪ್ರವಾಸಿಗರಲ್ಲಿ ಓರ್ವ ಬಂಡೆಕಲ್ಲಿನ ಮೇಲೆ ಬ್ಯಾಲೆನ್ಸ್ ಮಾಡಲು ಹೋಗಿ ಬಲಿಯಾಗಿದ್ದ. ಬಳ್ಳಾರಿ ಜಿಲ್ಲೆಯ ಮಿಂಚೇರಿ ನಿವಾಸಿ ವಿನೋದ್ (26) ಎಂಬಾತ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ. 2024 ಜ.4ರಂದು ತೀರ್ಥಹಳ್ಳಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿ ರಿಷಬ್ ಶೆಟ್ಟಿ ಸಾವಿಗೀಡಾಗಿದ್ದ. ಇದೀಗ 2025 ಜು.21ರಂದು ತಮಿಳುನಾಡು ಮೂಲದ ಬೆಂಗಳೂರು ಉದ್ಯೋಗಿ ರಮೇಶ್ ಹುಚ್ಚು ಸಾಹಸ ಮಾಡಲು ಹೋಗಿ ಅಸುನೀಗಿದ್ದಾನೆ. ಮೂರು ವರ್ಷದಲ್ಲಿ ಮೂವರ ಸಾವು ಸಂಭವಿಸಿದೆ. ಅಬ್ಬಿಯ ಆಕರ್ಷಣೆಯನ್ನು ದೂರದಿಂದ ನೋಡಿ ಆನಂದಿಸುವ ಬದಲು ಹುಚ್ಚಾಟ ಪ್ರದರ್ಶಿಸಲು ಹೋಗಿ ಮೂವರು ಜೀವತೆತ್ತಿದ್ದಾರೆ.
ಟ್ರಂಚ್ ತೋಡಿದರೆ ಸಾಕೆ?
ಮೂರು ವರ್ಷಗಳ ಹಿಂದೆ ಓರ್ವ ಯುವಕ ಅಸುನೀಗಿದ ನಂತರ ಮತ್ತು ಜಲಧಾರೆ ಪ್ರದೇಶದಲ್ಲಿ ಮೋಜು ಮಸ್ತಿ, ಗಲಾಟೆ ಪ್ರಕರಣ ಕಂಡುಬಂದ ಹಿನ್ನೆಲೆಯಲ್ಲಿ ಜಲಧಾರೆಗೆ ಸಾಗುವ ಮಾರ್ಗದಲ್ಲಿ ಟ್ರಂಚ್ ಹೊಡೆದು ನಿಬರ್ಂಧ ವಿಸಲಾಗಿತ್ತು. ಇದಾದ ನಂತರ ಮತ್ತಿಬ್ಬರು ಅಸುನೀಗಿರುವ ಹಿನ್ನೆಲೆಯಲ್ಲಿ ಸುರಕ್ಷೆ ವಿಷಯ ಚರ್ಚೆಗೊಳಪಟ್ಟಿದೆ. ರಸ್ತೆಯಲ್ಲಿ ಕಂದಕ ತೋಡಿದರೆ ವಾಹನಗಳಿಗೆ ತಡೆಯೊಡ್ಡಬಹುದು. ಆದರೆ ನಡೆದು ಹೋಗಲು ಯಾವುದೇ ಸಮಸ್ಯೆಯಿಲ್ಲ. ಅಲ್ಲದೆ ಜಲಪಾತಕ್ಕೆ ತೆರಳಲು ಹಲವು ದಾರಿಗಳಿವೆ. ಎಲ್ಲಿಂದ ಬೇಕಾದರೂ ಫಾಲ್ಸ್‌ಗೆ ಹೋಗುವ ಅವಕಾಶಗಳಿವೆ.
ನಿರ್ಬಂಧ ಸಲ್ಲ
ನಗರ ಹೋಬಳಿ ಎಲ್ಲ ವಿಭಾಗದಲ್ಲೂ ಅನ್ಯಾಯಕ್ಕೆ ಒಳಗಾಗಿದೆ. ಇಲ್ಲಿನ ಅಳಿದುಳಿದ ಪ್ರವಾಸಿ ತಾಣಗಳೇ ಈ ಭಾಗದ ಜೀವಂತಿಕೆಗೆ ಸಾಕ್ಷಿ. ಅವುಗಳಿಗೂ ನಿಬರ್ಂಧ ಹೇರಿದರೆ ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆ. ಸ್ಥಳೀಯ ಸುಳುಗೋಡು ಗ್ರಾಪಂ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಜಂಟಿಯಾಗಿ ಮುನ್ನೆಚ್ಚರಿಕೆ ಕ್ರಮ ಕೆಗೊಳ್ಳಲು ಅವಕಾಶವಿದೆ. ಪ್ರವಾಸಿಗರಿಗೆ ಜಲಪಾತ ವೀಕ್ಷಣೆ ಮುಕ್ತವಾಗಿಸಬೇಕು. ಕೆಲವು ಅವಘಡ ನಡೆದ ಕೂಡಲೇ ಎಲ್ಲರಿಗೂ ಪ್ರವೇಶ ನಿಬರ್ಂಧ ವಿಸುವುದಾದರೆ ಯಾವ ಜಲಪಾತಗಳೂ ವೀಕ್ಷಣೆಗೆ ಸಿಗಲಾರದು ಎಂಬುದು ಸ್ಥಳೀಯರ ಆಶಯ.
ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿ
ಮುಳುಗಡೆಯಿಂದ ಸಂತ್ರಸ್ತರಾದ ಸುಳುಗೋಡು, ಯಡೂರು ಗ್ರಾಪಂ ವ್ಯಾಪ್ತಿಗೆ ತಲಾಸಿ ಅಬ್ಬಿ ಫಾಲ್ಸ್ ವರದಾನ. ಗ್ರಾಪಂ, ಅರಣ್ಯ ಇಲಾಖೆ, ಗ್ರಾಮ ಅರಣ್ಯ ಸಮಿತಿ, ಪೊಲೀಸ್ ಇಲಾಖೆ ಒಳಗೊಂಡಂತೆ ಸಮಿತಿ ರಚನೆಯಾಗಲಿ. ಜಲಪಾತದ ಸಂರಕ್ಷಣೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಎಚ್ಚರಿಕೆಯ ಫಲಕಗಳು, ಅಪಾಯ ಇರುವ ಕಡೆ ಬೇಲಿ ನಿರ್ಮಾಣ, ಪ್ಲಾಸ್ಟಿಕ್‌ಬಳಕೆ ನಿಷೇಧ ಜಾಗೃತಿ ಮೂಡಿಸಬೇಕು. ಕೊಡಚಾದ್ರಿ ತಪ್ಪಲಿನ ಹಿಡ್ಲುಮನೆ ಫಾಲ್ಸ್ ನಿರ್ವಹಣೆಯಂತೆ ಶುಲ್ಕ ವಿಸಲು ಅವಕಾಶವಿದೆ. ಇನ್ನು ಆರಂಭದಲ್ಲಿ ಸಮಿತಿ ನಿರ್ವಹಣೆಯಲ್ಲಿ ಸಿಬ್ಬಂದಿ ನೇಮಕ ಮಾಡಿ, ಬಳಿಕ ಪ್ರವಾಸೋದ್ಯಮ ಅಭಿವೃದ್ಧಿಯಿಂದ ಬರುವ ಆದಾಯದಲ್ಲಿ ನಿರ್ವಹಿಸಬೇಕು. ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕೇವಲ ಟ್ರಂಚ್ ತೋಡಿ ನಿರ್ಬಂಧ ವಿಸಿದರೆ ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗುತ್ತದೆ. ಅಲ್ಲದೇ ಪೂರ್ಣ ಪ್ರಮಾಣದ ನಿರ್ಬಂಧ ವಿಸುವುದು ಕಷ್ಟ ಸಾಧ್ಯ. ಯಡೂರು ತಲಾಸಿ ಅಬ್ಬಿ ಫಾಲ್ಸ್ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಕೂಗು ಸಾಕಷ್ಟು ವರ್ಷಗಳಿಂದ ಕೇಳಿ ಬರುತ್ತಿದೆ. ಅಭಿವೃದ್ಧಿ ಮತ್ತು ಸಂರಕ್ಷಣೆ ಕ್ರಮ ಕೈಗೊಂಡರೆ ಜೀವಹಾನಿಯನ್ನು ತಡೆಗಟ್ಟಬಹುದು. ಇದು ಗ್ರಾಮಗಳ ಅಭಿವೃದ್ಧಿಗೂ ಪೂರಕವಾಗುತ್ತದೆ ಎಂಬುದು ಸ್ಥಳೀಯರ ಆಶಯ.
ಗಿಣಿಕಲ್ ಗ್ರಾಮದ ಅಬ್ಬಿ ಫಾಲ್ಸ್ ಅರಣ್ಯ ಪ್ರದೇಶದಲ್ಲಿದೆ. ಪ್ರವೇಶ ನಿರ್ಬಂಧ ಮತ್ತು ಕಠಿಣ ಕ್ರಮದ ಮುನ್ನೆಚ್ಚರಿಕಾ ಕ್ರಮಗಳ ಬ್ಯಾನರ್ ಅಳವಡಿಸಲಾಗಿದೆ. ಆದರೆ ಅದ್ಯಾವುದೂ ಉಳಿಯುವುದಿಲ್ಲ. ಮುಂದಿನ ಕ್ರಮದ ಬಗ್ಗೆ ಗ್ರಾಪಂ, ಪೊಲೀಸ್ ಇಲಾಖೆ ಜತೆ ಸಮಾಲೋಚಿಸಿ ಕ್ರಮ ಕೈಗೊಳ್ಳಲಾಗುವುದು.
ಸಂತೋಷ ಜಿ. ಮಲ್ಲನಗೌಡ
ವಲಯ ಅರಣ್ಯಾಕಾರಿ, ನಗರ
ಈ ಭಾಗದಲ್ಲಿ ನಿರಂತರವಾಗಿ ಅವಘಡಗಳು ನಡೆಯುತ್ತಿದೆ. ಸುರಕ್ಷೆ ದೃಷ್ಟಿಯಿಂದ ಎಚ್ಚರಿಕೆ ಬ್ಯಾನರ್ ಹಾಕಲಾಗಿದೆ. ಅವಘಡ ತಡೆಯಲು ಸ್ಥಳೀಯರ ಸಹಭಾಗಿತ್ವ ಮುಖ್ಯ.
ಗುರಣ್ಣ ಎಸ್. ಹೆಬ್ಬಾಳ, ಸಿಪಿಐ ಹೊಸನಗರ
ಅರಣ್ಯ, ಕಂದಾಯ ಮತ್ತು ಪೊಲೀಸ್ ಇಲಾಖೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಿ. ಜಲಪಾತಕ್ಕೆ ಪ್ರವೇಶ ನಿಬರ್ಂಧ ವಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಸುರಕ್ಷಿತ ಕ್ರಮಗಳನ್ನು ಅಳವಡಿಸಲಿ.
ಸುೀರ್ ಕುಮಾರ್, ಗ್ರಾಪಂ ಸದಸ್ಯ