ಶಿವಪ್ರಭು ಈಸರಗೊಂಡ ಉಪ್ಪಿನಬೆಟಗೇರಿ
ಕಳೆದ ವರ್ಷ ಆಗಸ್ಟ್ನಲ್ಲಿ ಮಳೆಯಿಂದ ಹಳ್ಳಿಗಳ ರಸ್ತೆಗಳು ಹಾಳಾಗಿವೆ. ಕೆಲವೆಡೆ ದುರಸ್ತಿಯಾಗಿಲ್ಲ. ಇದರಿಂದ ವಾಹನಗಳ ಸವಾರರು ತೊಂದರೆ ಅನá-ಭವಿಸುವಂತಾಗಿದೆ.
ಧಾರವಾಡದಿಂದ ಉಪ್ಪಿನಬೆಟಗೇರಿ ಮಾರ್ಗವಾಗಿ ಬೈಲಹೊಂಗಲಕ್ಕೆ ತೆರಳುವ ರಾಜ್ಯ ಹೆದ್ದಾರಿ ನಂ.1 ಚಿಕ್ಕಲಗುಡ್ಡಪಡುಗುದ್ರಿ ಮಾರ್ಗದಲ್ಲಿ ಗುಂಡಿಗಳು ಬಿದ್ದಿವೆ. ಕಲ್ಲುಗಳು ಮೇಲೆದ್ದಿವೆ. ವಾಹನಗಳ ಸಂಚಾರದಿಂದ ಧೂಳು ಮೇಲೇಳá-ತ್ತಿದೆ. ಇದರಿಂದಾಗಿ ರಸ್ತೆ ಕಾಣದಂತಾಗಿ ವಾಹನಗಳ ಚಾಲಕರು ಪ್ರಯಾಸಪಡá-ವಂತಾಗಿದೆ. ಕಳೆದ ವರ್ಷ ಆಗಸ್ಟ್ನಲ್ಲಿ ಸá-ರಿದ ಮಳೆಯಿಂದ ಧಾರವಾಡದಿಂದ ಸವದತ್ತಿಗೆ ಸಂಪರ್ಕ ಕಲ್ಪಿಸುವ ಹಾರೋಬೆಳವಡಿ ಬಳಿಯ ರಾಜ್ಯ ಹೆದ್ದಾರಿಯಲ್ಲಿರುವ ತುಪ್ಪರಿ ಹಳ್ಳದ ಸೇತುವೆ ಕೊಚ್ಚಿ ಹೋಗಿತ್ತು. ಅದರಿಂದ ರಸ್ತೆ ಬಂದ್ ಮಾಡಿದ್ದರಿಂದ ಎಲ್ಲ ವಾಹನಗಳು ಉಪ್ಪಿನಬೆಟಗೇರಿ ಮೂಲಕ ಸಂಚರಿಸá-ತ್ತಿದ್ದವು. ವಾಹನಗಳ ಸಂಚಾರ ದಟ್ಟಣೆಯಿಂದ ಈ ರಸ್ತೆ ಸಂಪೂರ್ಣ ಹದಗೆಟ್ಟಿದೆ.
ಉಪ್ಪಿನಬೆಟಗೇರಿಯಿಂದ ಯಾದವಾಡ ಮಾರ್ಗವಾಗಿ ಧಾರವಾಡಕ್ಕೆ ತೆರಳುವ ರಸ್ತೆ ಹಾಳಾಗಿತ್ತು. ಇದನ್ನು 2 ಬಾರಿ ದುರಸ್ತಿ ಮಾಡಲಾಗಿದೆ. ಉಪ್ಪಿನಬೆಟಗೇರಿಯಿಂದ ನಾಲ್ಕು ಕಿಮೀ ಕ್ರಮಿಸಿದರೆ ಬೆಳಗಾವಿ ಗಡಿ. ಅಲ್ಲಿಯವರೆಗೆ ರಸ್ತೆ ದುರಸ್ತಿ ಮಾಡಬೇಕಾದ ಅಧಿಕಾರಿಗಳು ಮಾಡಿಲ್ಲ. ಉಪ್ಪಿನಬೆಟಗೇರಿ ಗ್ರಾಪಂ ವ್ಯಾಪ್ತಿಯ ಸೈಬನಕೊಪ್ಪಕ್ಕೆ ತೆರಳಲು ಈ ರಸ್ತೆಯಲ್ಲಿ ಸಂಚರಿಸಲು ಅದರಲ್ಲೂ ರಾತ್ರಿ ವೇಳೆ ತೀವ್ರ ಸಮಸ್ಯೆ ಆಗá-ತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.
ಉಪ್ಪಿನಬೆಟಗೇರಿ ಬೈಲಹೊಂಗಲ ರಾಜ್ಯ ಹೆದ್ದಾರಿ ಆರು ತಿಂಗಳ ಹಿಂದೆ ಹಾಳಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನ ಹರಿಸá-ತ್ತಿಲ್ಲ. ಪಿಡಬ್ಲ್ಯುಡಿ, ಜನಪ್ರತಿನಿಧಿಗಳು ಆದಷ್ಟು ಬೇಗ ರಸ್ತೆ ದುರಸ್ತಿ ಮಾಡಿ ಮುಂದೆ ಸಂಭವಿಸá-ವ ಅನಾಹುತಗಳನ್ನು ತಪ್ಪಿಸಬೇಕು. | ರವಿ ಪೂಜಾರ ಸೈಬನಕೊಪ್ಪ ಗ್ರಾಮಸ್ಥ
ಕಳೆದ ವರ್ಷ ಆಗಸ್ಟ್ನಲ್ಲಿ ಮಳೆಯಿಂದ ಉಪ್ಪಿನಬೆಟಗೇರಿ-ಬೈಲಹೊಂಗಲ ರಾಜ್ಯ ಹೆದ್ದಾರಿಯಲ್ಲಿ 300 ಮೀಟರ್ ರಸ್ತೆ ಹಾಳಾಗಿದೆ. ಕೆಲ ಕಾರಣಗಳಿಂದ ದುರಸ್ತಿ ವಿಳಂಬವಾಗಿದೆ. ಒಂದು ವಾರದೊಳಗೆ ದುರಸ್ತಿ ಮಾಡಲಾಗá-ವುದು. |ಎನ್.ವಿ. ಪಾಟೀಲ ಪಿಡಬ್ಲ್ಯುಡಿ ಧಾರವಾಡ ಎಇಇ