ಮೈಸೂರು: ಉದ್ಯಮಿಯ ಅಪಹರಣಕ್ಕೆ ಯತ್ನಿಸಿದ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರು- ಬೆಂಗಳೂರು ರಸ್ತೆಯ ವರ್ತುಲ ರಸ್ತೆ ಜಂಕ್ಷನ್‌ನಲ್ಲಿ ಲಾರಿ ಚಾಲಕ ತನ್ನ ಸಹಚರೊಂದಿಗೆ ಉದ್ಯಮಿಯನ್ನು ಅಪಹರಿಸಲು ವಿಲ ಯತ್ನ ನಡೆಸಿದ್ದ. ಈ ಕುರಿತು ಎನ್.ಆರ್.ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಲಾರಿ ಚಾಲಕ ಸೇರಿದಂತೆ ಕೃತ್ಯದಲ್ಲಿ ಭಾಗಿಯಾಗಿದ್ದ ಐವರನ್ನು ಬಂಧಿಸುವಲ್ಲಿ ಯಶಸ್ಸಿಯಾಗಿದ್ದಾರೆ. ಇವರಿಂದ ಅಪರಾಧ ಕೃತ್ಯಕ್ಕೆ ಬಳಕೆ ಮಾಡಿದ್ದ ಕಾರ್, ಬೈಕ್ ಮತ್ತು 3 ಮೊಬೈಲ್ ಜಪ್ತಿ ಮಾಡಲಾಗಿದೆ.