ರಾಯಬಾಗ: ಪ್ರಸ್ತುತ ರಾಜಕಾರಣದಲ್ಲಿ ಅಪರೂಪದಲ್ಲಿ ಅಪರೂಪ ರಾಜಕಾರಣಿ ದುರ್ಯೋಧನ ಐಹೊಳೆ ಎಂದು ಸಾಹಿತಿ ವಿ.ಎಸ್.ಮಾಳಿ ಹೇಳಿದರು.
ಪಟ್ಟಣದ ಮಹಾವೀರ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಾಸಕ ಡಿ.ಎಂ.ಐಹೊಳೆ ಅವರ ಜನ್ಮದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹಣಬಲ, ತೋಳಬಲ, ಜಾತಿಬಲ ಮೀರಿ ಜನರ ವಿಶ್ವಾಸ ಗೆದ್ದು ಸತತ ನಾಲ್ಕನೆಯ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅತ್ಯಂತ ಸಜ್ಜನ ಮತ್ತು ಸರಳ ವ್ಯಕ್ತಿತ್ವದ ವ್ಯಕ್ತಿ ಎಂದರು.
ಕವಲಗುಡ್ಡದ ಅಮರೇಶ್ವರ ಮಹಾರಾಜರು ಮಾತನಾಡಿ, ಜೀವನದಲ್ಲಿ ಆಧ್ಯಾತ್ಮಿಕತೆ ಅಳವಡಿಸಿಕೊಂಡು ಸಾರ್ವಜನಿಕ ಸೇವೆ ಸಲ್ಲಿಸುತ್ತಿರುವ ಐಹೊಳೆ ಆವರ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ತಿಳಿಸಿದರು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಡಿ.ಎಂ.ಐಹೊಳೆ ಅಧ್ಯಕ್ಷತೆ ವಹಿಸಿದ್ದರು. ಅರುಣ ಐಹೊಳೆ, ಶಿವಾನಂದ ಐಹೊಳೆ ಇತರರು ಇದ್ದರು.
ವಿಜೇತರಿಗೆ ಬಹುಮಾನ ವಿತರಣೆ: ತತ್ತ್ವಪದ ವಿಭಾಗದಲ್ಲಿ ರಾಘವೇಂದ್ರ ಖಾನಪ್ಪನವರ ಪ್ರಥಮ, ಜಕ್ಕು ಖಿಲಾರೆ ದ್ವಿತೀಯ, ಸಂತೋಷ ರಿಜಕನ್ನವರ ತೃತೀಯ, ಚಲನಚಿತ್ರ ವಿಭಾಗದಲ್ಲಿ ಸುದರ್ಶನ ರೆಬ್ಬನ್ನವರ ಪ್ರಥಮ, ಹಾಲಪ್ಪ ಅಂಬಿನಾಯಿಕ ದ್ವಿತೀಯ, ಸಪ್ನಾ ಕೊರವಿ ತೃತೀಯ, ಜಾನಪದ ವಿಭಾಗದಲ್ಲಿ ಅಂಜಲಿ ಕೋಹಳ್ಳಿ ಪ್ರಥಮ, ಕಾರ್ತಿಕ ಮುಕ್ಕೆನ್ನವರ ದ್ವಿತೀಯ, ಕಿರಣ ವಗ್ಗನ್ನವರ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅರುಣ ಐಹೊಳೆ ಬಹುಮಾನ ವಿತರಿಸಿದರು.