ಚಿಕ್ಕಮಗಳೂರು: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ಸುಮಾರು ಐದು ವರ್ಷದ ಗಂಡು ಚಿರತೆ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಉz್ದೆÃಬೋರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಉz್ದÉÃಬೋರನಹಳ್ಳಿ ಗ್ರಾಮದ ಏರ್ಟೆಲ್ ಟವರ್ ಬಳಿ ಈ ಅವಘಡ ಸಂಭವಿಸಿದ್ದು ೫ ವರ್ಷದ ಗಂಡು ಚಿರತೆ ಅಪಘಾತದ ರಭಸಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದೆ.
ಕಡೂರು-ಮಂಗಳೂರು ರಾಷ್ಟಿçÃಯ ಹೆದ್ದಾರಿಯಲ್ಲಿ ಈ ಅವಘಡ ಸಂಭವಿಸಿದ್ದು, ಟಿಟಿ ವಾಹನಕ್ಕೆ ಸಿಲುಕಿ ಚಿರತೆ ಸಾವನಪ್ಪಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಚಿರತೆ ರಸ್ತೆ ದಾಟುವಾಗ ಜಂಪ್ ಮಾಡಿ ನೇರವಾಗಿ ಟಿಟಿ ವಾಹನಕ್ಕೆ ಸಿಲುಕಿದೆ ಎಂದು ಹೇಳಲಾಗಿದೆ.
ಚಿರತೆ ಗ್ರಾಮದ ಒಳಕ್ಕೆ ನುಗ್ಗಿದ್ದರೆ ದೊಡ್ಡ ಅನಾಹುತ ಸಂಭವಿಸುತ್ತಿತ್ತು. ಆದರೆ ಗ್ರಾಮದ ಬಾರ್ಡರ್ ನಲ್ಲಿ ಚಿರತೆ ರಸ್ತೆ ಕ್ರಾಸ್ ಮಾಡುವಾಗ ಈ ಅಪಘಾತ ಸಂಭವಿಸಿದೆ. ಗ್ರಾಮಸ್ಥರು ರಾಷ್ಟಿçÃಯ ಹೆದ್ದಾರಿ ಆಗಿರುವುದರಿಂದ ಯಾವುದೇ ಅನಾಹುತ ಸಂಭವಿಸಬಾರದು ಎಂಬ ಕಾರಣಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ಜೊತೆ ಜಗಳವಾಡಿ ಉz್ದÉÃಬೋರನಹಳ್ಳಿ ಗ್ರಾಮದ ವ್ಯಾಪ್ತಿಗೆ ೧ ಲಕ್ಷ ಖರ್ಚು ಮಾಡಿ ಹೈ ಮಾಸ್ಕ್ ಲೈಟ್ ಅಳವಡಿಸಿದ್ದರು. ಆದರೆ ಗ್ರಾಮದ ತುಸು ಹೊರಭಾಗದಲ್ಲಿ ಲೈಟ್ ಇಲ್ಲದ ಜಾಗದಲ್ಲಿ ಚಿರತೆ ಅಪಘಾತಕ್ಕೊಳಗಾಗಿ ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.