ಜಿಲ್ಲೆ

ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಲಿ

ಹೂವಿನಹಡಗಲಿ: ಸುಪ್ರೀಂಕೊರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯುವ ಯತ್ನ ಖಂಡಿಸಿ ಪಟ್ಟಣದ ತಹಸಿಲ್ ಕಚೇರಿ ಮುಂಭಾಗದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಶಿರಸ್ತೇದಾರ್ ಮಹಮ್ಮದ್ ಸಲೀಂ ಅವರಿಗೆ ಗುರುವಾರ ಮನವಿ ಸಲ್ಲಿಸಿದವು.

ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ರಾಜ್ಯ ಉಪಾಧ್ಯಕ್ಷ ಹಲಗಿ ಸುರೇಶ್ ಮಾತನಾಡಿ, ಸುಪ್ರೀಂಕೋರ್ಟ್‌ನಲ್ಲಿ ವಕೀಲರೊಬ್ಬರು ಮುಖ್ಯ ನ್ಯಾಯಮೂರ್ತಿಯನ್ನು ಗುರಿಯಾಗಿಸಿ ಶೂ ಎಸೆಯಲು ಯತ್ನಿಸಿದ್ದು ಭಾರತದ ನ್ಯಾಯಾಂಗ ವ್ಯವಸ್ಥೆ ಪ್ರಕಾರ ಅಪರಾಧವಾಗಿದೆ ಎಂದರು.

ವಕೀಲ ರಾಕೇಶ್ ಕಿಶೋರ್ ಈ ಘಟನೆ ನಡೆದ ಬಳಿಕ ಸನಾತನ ಧರ್ಮದ ಮೇಲಿನ ಅವಮಾನವನ್ನು ಹಿಂದುಸ್ಥಾನ ಸಹಿಸುವುದಿಲ್ಲ ಎಂದು ಕೂಗಾಡಿದ್ದಾನೆ.ಅವನ ಈ ಕುಗಾಟಕ್ಕೆ ಸನಾತನ ಧರ್ಮದ ಪ್ರತಿಪಾದಕರಾದ ಆರ್‌ಎಸ್‌ಎಸ್ ಮತ್ತು ಬಿಜೆಪಿ ಕೆಲ ನಾಯಕರ ಮಾನವ ವಿರೋಧಿ ಸಿದ್ಧಾಂತದ ಪ್ರೇರಣೆಯೇ ಕಾರಣವಾಗಿದೆ. ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆಯಲು ಯತ್ನಿಸಿದವರ ವಿರುದ್ಧ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.

ಸಿಪಿಐ ತಾಲೂಕು ಸಹಕಾರ್ಯದರ್ಶಿ ಬಸವರಾಜ್ ಸಂಶಿ, ದಲಿತ ಸೇನಾ ತಾಲೂಕು ಅಧ್ಯಕ್ಷ ಸಿ.ದುರುಗೇಶ, ಅಂಬೇಡ್ಕರ ಸೇನಾ ಸಮಿತಿ ತಾಲೂಕು ಅಧ್ಯಕ್ಷ ಎ.ಭರಮಪ್ಪ, ಬಾಬು ಜಗಜೀವನರಾಮ್ ಸಂಘದ ತಾಲೂಕು ಅಧ್ಯಕ್ಷ ಬಿ.ಆನಂದ, ಎಸ್‌ಡಿಪಿಐ ತಾಲೂಕು ಅಧ್ಯಕ್ಷ ಎ.ದೇವರಾಜ್. ಪ್ರಮುಖರಾದ ದಡರಪ್ಪ ಟಿ., ದೇವೇಂದ್ರಪ್ಪ ಇತರರಿದ್ದರು.