ಬಾಗಲಕೋಟೆ: ಮನೆಯಲ್ಲಿ ಒಬ್ಬಳೆ ಇದ್ದಾಗ ಬುದ್ದಿ ಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ಮಾಡಿದ ಅಪಾರಾಽಗೆ ಅಜೀವ ಜೀವಾವಽ ಶಿಕ್ಷೆ, ೪೨ ಸಾವಿರ ರೂ. ದಂಡ ವಿಧಿಸಿ ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪು ನೀಡಿದೆ.
ಹನಮಂತ ಮಾಗುಂಡಪ್ಪ ಹುಲಸಗೇರಿ ಶಿಕ್ಷೆಗೆ ಗುರಿಯಾದ ಅರಪಾಧಿ. ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮದವನಾದ ಈತನು ೨೦೧೯ ಮೇ ೧೭ ರಂದು ಗ್ರಾಮದಲ್ಲಿ ಉಡಿ ತುಂಬುವ ಕಾರ್ಯಕ್ರಮ ಇತ್ತು, ಗ್ರಾಮದ ಮನೆಯೊಂದರಲ್ಲಿ ಬುದ್ದಿ ಮಾಂದ್ಯ ಮಹಿಳೆ ಒಬ್ಬಳೇ ಇದ್ದಾಗ ಮಧ್ಯಾಹ್ನ ಸಮಯದಲ್ಲಿ ಅಕ್ರಮವಾಗಿ ಮನೆಯ ಪ್ರವೇಶ ಮಾಡಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ತಪ್ಪಿಸಿಕೊಂಡು ಹೋಗುವಾಗ ಸಂತ್ರಸ್ತ ಮಹಿಳೆಗೆ ತೆಲೆಗೆ ಗಾಯಪಡಿಸಿದ್ದನು. ಈ ಬಗ್ಗೆ ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರಂಭದಲ್ಲಿ ಅಪರಾಽ ಯಾರೆಂದು ಮಾಹಿತಿ ಇರಲಿಲ್ಲ. ಬೆರಳಚ್ಚು ತಜ್ಞರು ಪರಿಶೀಲನೆ ವೇಳೆ ಆಕಸ್ಮಿಕವಾಗಿ ಸಿಕ್ಕ ಬೆರಳು ಮುದ್ರೆ ಖಾತ್ರಿ ಪಡಿಸಿತ್ತು. ನಂತರ ಬಾದಾಮಿ ಸಿಪಿಐ ಕೆ.ಎಸ್.ಹಟ್ಟಿ ತನಿಖೆ ನಡೆಸಿ ವೈದ್ಯಕೀಯ ಪರೀಕ್ಷೆಯಲ್ಲಿ ಹನುಮಂತ ಹುಲಸಗೇರಿ ಮಾಡಿರುವ ಕೃತ್ಯ ಬೆಳಕಿಗೆ ಬಂದಿತ್ತು. ಈ ಪ್ರಕರಣದ ಕೊನೆಯ ಹಂತದ ತನಿಖೆ ಸಿಪಿಐ ಆರ್.ಎಚ್.ಹಾನಾಪೂರ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪನೆ ಸಲ್ಲಿಸಿದ್ದರು.
ಪ್ರಕರಣ ಸಾಬೀತಾದ ಹಿನ್ನಲೆಯಲ್ಲಿ ಅಜೀವ ಜೀವಾವಧಿ ಶಿಕ್ಷೆ, ೪೨ ಸಾವಿರ ರೂ. ದಂಡ ವಿಽಸಿ ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪು ನೀಡಿದೆ. ಸರ್ಕಾರ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕ ವಿ.ಜಿ.ಹೆಬಸೂರ ಪ್ರಕರಣವನ್ನು ನಡೆಸಿ ವಾದವನ್ನು ಮಂಡಿಸಿದ್ದರು.