ಚಿತ್ತಾಪುರ ತಾಲೂಕಿನ ದಿಗ್ಗಾಂವ್‌ದಲ್ಲಿ ಹಮ್ಮಿಕೊಂಡಿದ್ದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮವನ್ನು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣವರ್ ಉದ್ಘಾಟಿಸಿದರು. ಶಂಕರಗೌಡ ಪಾಟೀಲ್, ಹರಳಯ್ಯ ಬಡಿಗೇರ, ಶ್ರೀಮಂತ ಗುತ್ತೇದಾರ್, ಚಂದ್ರಾಮಪ್ಪ ಇದ್ದರು. 
ಜಿಲ್ಲೆ

ಅಪರಾಧ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ

ಚಿತ್ತಾಪುರ: ಮನೆ ಮನೆಗೆ ಪೊಲೀಸ್ ಕಾರ್ಯಕ್ರಮವು ಪೊಲೀಸ್ ಮತ್ತು ಸಾರ್ವಜನಿಕರ ಮಧ್ಯೆ ಸಂಪರ್ಕ, ಸಂಬAಧ ವೃದ್ಧಿ ಮಾಡುವ ವಿನೂತನ ಕಾರ್ಯಕ್ರಮವಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣವರ್ ಹೇಳಿದರು. ದಿಗ್ಗಾಂವ್‌ದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಲು ಹಾಗೂ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಮುಖ್ಯ. ಅಪರಾಧಗಳ ಸ್ವರೂಪ ಇದೀಗ ಡಿಜಿಟಲï ರೂಪ ಪಡೆದಿದೆ. ಡಿಜಿಟಲï ಅರೆಸ್ಟ್ ಮೂಲಕ ಹೆದರಿಸಿ ಹಣ ಕೀಳುವ ಕೆಲಸ ನಡೆಯುತ್ತಿದೆ. ಮನೆಯಲ್ಲಿಯೇ ಕುಳಿತು ಹಣ ಗಳಿಸಿ ಹೀಗೆ ಬಣ್ಣ-ಬಣ್ಣದ ಮಾತು ಹೇಳಿ ಆನೇಕ ರೀತಿಯಲ್ಲಿ ಮೋಸ ನಡೆಯುತ್ತಿದೆ. ಹೀಗಾಗಿ ಇಂತಹ ವಂಚನೆಗಳಿAದ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು. ಡಿವೈಎಸ್‌ಪಿ ಶಂಕರಗೌಡ ಪಾಟೀಲ್, ಗ್ರಾಪಂ ಅಧ್ಯP್ಷÀ ಹರಳಯ್ಯ ಬಡಿಗೇರ್, ಮಾಜಿ ಅಧ್ಯP್ಷÀ ಶ್ರೀಮಂತ ಗುತ್ತೇದಾರ್, ಪಿಎಸ್‌ಐ ಚಂದ್ರಾಮಪ್ಪ ಮಾತನಾಡಿದರು. ಗ್ರಾಪಂ ಉಪಾಧ್ಯP್ಷÀ ಜಗನ್ನಾಥ ಸೀದಾ, ಎಎಸ್‌ಐ ಬಾಬುರಾವ್, ಪ್ರಮುಖರಾದ ದತ್ತು ಜಾನೆ, ಸಿದ್ದಣ್ಣಗೌಡ ಆರ್.ಡಿ., ಗುರುಲಿಂಗ ಬಂದಳ್ಳಿ, ಭೀಮರಾಯ ದೇವರ್, ತಿಪ್ಪಣ್ಣ ಸಂಗಾವಿ, ಮನಶೆಟ್ಟಪ್ಪ ಸಂಗಾವಿ, ಅರ್ಜುನ ಕಟಿಶಾಪುರ, ಶರಣು ಬುಳ್ಳಾ, ಸುಭಾಶಚಂದ್ರ ಪವಾರ, ನಾಗಪ್ಪ ಕಂಬಾರ, ರಾಜು ಪುಟಪಾಕ್, ನಬಿಲಾಲ್ ಇತರರಿದ್ದರು. ಪಿಎಸ್‌ಐ ಶ್ರೀಶೈಲ್ ಅಂಬಾಟಿ ಪ್ರಾಸ್ತಾವಿಕ ಮಾತನಾಡಿದರು. ಜಗನ್ನಾಥ ಕಲಕೇರಿ ನಿರೂಪಣೆ ಮಾಡಿದರು. ಪಿಡಿಒ ಸಂಗೀತಾ ವಂದಿಸಿದರು.