ಮೈಸೂರು: ಮನುಷ್ಯನಿಗೆ ಅಪಮಾನ, ನಿಂದನೆಗಳು ಆತನಿಗೆ ಛಲ ಗಟ್ಟಿಕೊಳ್ಳುವಂತೆ ಮಾಡುತ್ತದೆ. ಇದರಿಂದ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎನ್ನುವುದನ್ನು ಕಲಿಸುತ್ತದೆ. ಅದಕ್ಕೆ ವಿಜಯ ಸಂಕೇಶ್ವರ ಅವರೇ ಉದಾಹರಣೆ ಎಂದು ನಟ, ನಿರ್ಮಾಪಕ ಡಾಲಿ ಧನಂಜಯ ತಿಳಿಸಿದರು.
ನಗರದಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ (ಐಎಲ್‌ವೈಎಫ್)ಯ 2023ನೇ ವರ್ಷದ ಪದಾಧಿಕಾರಿಗಳ ಪದಗ್ರಹಣ ಹಾಗೂ ವಾರ್ಷಿಕ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಇಂಜಿನಿಯರಿಂಗ್ ಮಾಡಿದರೂ ನನ್ನೊಳಗಿನ ಕಲಾವಿದ ಸದಾ ಜಾಗೃತನಾಗಿದ್ದರಿಂದ ಕೆಲಸ ಬಿಟ್ಟು ರಂಗಭೂಮಿಯತ್ತ ತೆರಳಿದೆ. ಬೆಂಗಳೂರು ನನಗೆ ಇನ್ನೊಂದು ಪ್ರಪಂಚವನ್ನು ನೋಡುವಂತೆ ಮಾಡಿತು. ಜನ ಹೇಗೆಲ್ಲ ಇರುತ್ತಾರೆ ಎಂದು ತೋರಿಸಿಕೊಟ್ಟಿತ್ತು. ಇದು ಇಷ್ಟಕ್ಕೆ ಬೆಳೆಯಲು ಸಾಧ್ಯವಾಯಿತು ಎಂದು ತಮ್ಮ ಬದುಕಿನ ವೃತ್ತಾಂತ ತಿಳಿಸಿದರು.