ಜಿಲ್ಲೆ

ಅಪಘಾತದಲ್ಲಿ ಸ್ಕೂಟರ್ ಸವಾರ ಸಾವು

ಮಡಿಕೇರಿ: ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ(ಸುದರ್ಶನ ವೃತ್ತ)ದ ಸಮೀಪ ಗೂಡ್ಸ್ ವಾಹನ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರ ಮೃತಪಟ್ಟಿದ್ದಾರೆ.
2ನೇ ಮೊಣ್ಣಂಗೇರಿಯ ಬಿ.ಎಸ್.ಧನಂಜಯ್(56) ಮೃತ ದುಧೈವಿ. ಸಮೀಪದ ಚೈನ್‌ಗೇಟ್ ಬಳಿ ಸ್ನೇಹಿತರೊಬ್ಬರ ಮನೆಗೆ ಊಟಕ್ಕೆಂದು ಭಾನುವಾರ ತೆರಳುತ್ತಿದ್ದ ಸಂದರ್ಭ ಕಾರ್ಯಪ್ಪ ವೃತ್ತದಿಂದ ಕುಶಾಲನಗರ ರಸ್ತೆಯ ಕಡೆ ಹೋಗುತ್ತಿದ್ದಾಗ ಕಾರನ್ನು ಓವರ್‌ಟೇಕ್ ಮಾಡಲು ಧನಂಜಯ ಪ್ರಯತ್ನಿಸಿದ್ದಾರೆ. ಈ ಸಂದರ್ಭ ತಮಿಳುನಾಡಿನಿಂದ ಮಂಗಳೂರಿಗೆ ಸರಕು ಸಾಗಿಸುತ್ತಿದ್ದ ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ. ಗಂಭೀರ ಗಾಯಗೊಂಡ ಸವಾರನನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ. ಮಡಿಕೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.