ಜಿಲ್ಲೆ

ಅಪಘಾತದಲ್ಲಿ ಮಹಿಳೆ ಸಾವು, ನಾಲ್ವರಿಗೆ ಗಾಯ

ಹುಲಿಯೂರುದುರ್ಗ-: ರಾಜ್ಯ ಹೆದ್ದಾರಿ 33ರ ಕಂಪ್ಲಾಪುರ ಗ್ರಾಮದ ಬಳಿ ನಡೆದ ಅಪಘಾತದಲ್ಲಿ ಒರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಗುಳೆದಗುಡ್ಡ ನಿವಾಸಿಗಳಾದ ಬಸವರಾಜು ಅವರ ಪತ್ನಿ ಕಸ್ತೂರಿ (43)ಮೃತೆ. ಬಸವರಾಜು(55) ಕಸ್ತೂರಿ (43) ಶಾಂತಮ್ಮ(60) ವಿಶ್ವನಾಥ(17) ಪಾವನಿ(11) ಅವರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೈಸೂರಿನ ಬಿಇಎಂಎಲ್​ನಲ್ಲಿ ಇಂಜಿನಿಯರ್​ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸವರಾಜು ಅವರು ಬಾದಾಮಿ ತಾಲೂಕಿನಿಂದ ಕುಣಿಗಲ್​ ಮಾರ್ಗವಾಗಿ ಮೈಸೂರಿಗೆ ತೆರಳುತ್ತಿದ್ದ ವೇಳೆ ಹುಲಿಯೂರುದುರ್ಗ ಬಳಿ ಸೋಮವಾರ ಬೆಳಗಿನ ಜಾವ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕ ಉರುಳಿದೆ. ಹುಲಿಯೂರುದುರ್ಗ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.