ಶೃಂಗೇರಿ ತಾಲೂಕಿನ ಶಿಡ್ಲೆ ಬಳಿ ಅಪಘಾತ ಸಂಭವಿಸಿರುವುದು. 
ಜಿಲ್ಲೆ

ಅಪಘಾತದಲ್ಲಿ ಮಹಿಳೆ ಸಾವು

ಶೃಂಗೇರಿ: ಮೆಣಸೆ ಗ್ರಾಪಂ ವ್ಯಾಪ್ತಿಯ ಶಿಡ್ಲೆ ಬಳಿ ಶನಿವಾರ ಪ್ರವಾಸಿಗರ ವಾಹನಗಳು ಮುಖಾಮುಖಿ ಡಿಕ್ಕಿಹೊಡೆದುಕೊಂಡು ಮಹಿಳೆ ಮೃತಪಟ್ಟಿದ್ದಾರೆ. ನಾಲ್ವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ಮೃತಪಟ್ಟವರನ್ನು ತಮಿಳುನಾಡಿನ ಧರ್ಮಪುರಿಯ ಭುವನಾ (65) ಎಂದು ಗುರುತಿಸಲಾಗಿದೆ. ಶೃಂಗೇರಿಗೆ ಆಗಮಿಸಿ ದರ್ಶನ ಪಡೆದು ತಮಿಳುನಾಡಿಗೆ ವಾಪಸ್ ಹೋಗುವಾಗ ಘಟನೆ ಸಂಭವಿಸಿದೆ. ಇನ್ನೂ ನಾಲ್ವರಿಗೆ ತೀವ್ರ ಗಾಯವಾಗಿದ್ದು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನಿಂದ ಶೃಂಗೇರಿ ಕಡೆಗೆ ಬರುತ್ತಿದ್ದ ಟಿಟಿ ವಾಹನ ಹಾಗೂ ಶೃಂಗೇರಿಯಿಂದ ತಮಿಳುನಾಡು ಕಡೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದುಕೊಂಡಿವೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.