ಕುಶಾಲನಗರ: ಸಮೀಪದ ಹುದುಗೂರು ಗ್ರಾಮದ ಮುಖ್ಯರಸ್ತೆಯಲ್ಲಿ ಶನಿವಾರ ಸಂಜೆ ಟಿಪ್ಪರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಯಡವನಾಡು ಗ್ರಾಮದ ನಿವಾಸಿ ಪ್ರವೀಣ್ (46) ಮೃತ. ಕೆಲಸ ಮುಗಿಸಿಕೊಂಡು ಪ್ರವೀಣ್ ಹಾರಂಗಿಯಿಂದ ಹುದುಗೂರು ಮಾರ್ಗವಾಗಿ ತೆರಳುವ ಸಂದರ್ಭ ಸೋಮವಾರಪೇಟೆ ಕಡೆಯಿಂದ ಬರುತ್ತಿದ್ದ ಟಿಪ್ಪರ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿದೆ. ತಲೆಗೆ ಗಂಭೀರ ಗಾಯಗೊಂಡು ಪ್ರವೀರ್ಣ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನೆ ಸಂಬಂಧ ಏಳನೇ ಹೊಸಕೋಟೆ ನಿವಾಸಿಯಾದ ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.