ಜಿಲ್ಲೆ

ಅಪಘಾತದಲ್ಲಿ ಬೈಕ್​ ಸವಾರ ಸಾವು

ಹುಳಿಯಾರು: ಸಮೀಪದ ತಿಮ್ಲಾಪುರ ಗೇಟ್​ ಬಳಿ ಸೋಮವಾರ ಕಾರು ಮತ್ತು ಬೈಕ್​ ನಡುವೆ ಡಿಕ್ಕಿಯಾಗಿ ಬೈಕ್​ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಂದನಕೆರೆ ಹೋಬಳಿಯ ಬೇವಿನಹಳ್ಳಿಯ ಪರ್ವೇಜ್​ (34) ಮೃತ. ಇವರು ಹುಳಿಯಾರಿನಿಂದ ಮತಿಘಟ್ಟಗೆ ಹೋಗುವಾಗ ಅಪಘಾತ ಸಂಭವಿಸಿದೆ. ಕಾರಿನ ಚಾಲಕ ಸಬ್ಬೆನಹಳ್ಳಿ ಕಾಂತರಾಜು ಅವರಿಗೂ ಗಾಯಗಳಾಗಿದ್ದು, ಹುಳಿಯಾರು ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಹುಳಿಯಾರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.