ಬುಕ್ಕಾಪಟ್ಟಣ: ಶಿರಾ ತಾಲೂಕು ಹೂಯಿಲ್ದೊರೆ ಸಮೀಪದ ರಾಷ್ಟ್ರೀಯ ಹೆದ್ದಾರಿ&234ರ ಸೇತುವೆ ಬಳಿಯ ತಿರುವಿನಲ್ಲಿ ಕಾರು&ಬೈಕ್ ಮಧ್ಯೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಗಾಯಗೊಂಡಿದ್ದಾನೆ. ಬಡಕೆಗುಡ್ಲು ಗ್ರಾಮದ ಪುನೀತ್ ಗಾಯಗೊಂಡವ. ಹೂಯಿಲ್ದೊರೆಯಿಂದ ಶಿರಾ ಕಡೆಗೆ ಪ್ರಯಾಣಿಸುತ್ತಿದ್ದಾಗ ಶಿರಾ ಕಡೆಯಿಂದ ಬಂದ ಇಕೋ ವಾಹನ ಡಿಕ್ಕಿಹೊಡೆದಿದೆ ಎನ್ನಲಾಗಿದ್ದು, ಗಂಭೀರ ಗಾಯಗೊಂಡ ಪುನೀತ್ ಅವರನ್ನು ಚಿಕಿತ್ಸೆಗೆಂದು ಆಂಬುಲೆನ್ಸ್ನಲ್ಲಿ ಶಿರಾ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.
ಪಾವಗಡ: ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ದೋಮ್ಮತಮರಿ ಸಮೀಪ ಶುಕ್ರವಾರ ಅಪರಿಚಿತ ವಾಹನ ಬೈಕ್ಗೆ ಡಿಕ್ಕಿಯಾಗಿ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ವೆಂಕಟಾಪುರ ಗ್ರಾಮದ ನಿವಾಸಿ ಖಾಸಿಂ(55) ಮೃತ. ಶುಕ್ರವಾರ ಬೆಳಗಿನ ಜಾವ 6 ಗಂಟೆಯಲ್ಲಿ ಬೈಕ್ನಲ್ಲಿ ದೋಮ್ಮತಮರಿ ಗ್ರಾಮದ ಮೂಲಕ ಆಂಧ್ರದ ಪೆನುಕೊಂಡೆಕ್ಕೆ ತೆರಳುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪಾವಗಡ ಪೋಲಿಸರು ಘಟನಾ ಸ್ಥಳ ಪರಿಶೀಲಿಸಿ, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಪಾವಗಡ ಆಸ್ಪತ್ರೆಗೆ ರವಾನಿಸಿದ್ದಾರೆ.