ತಿಪಟೂರು: ತಾಲೂಕಿನ ಕರಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಶೆಟ್ಟಿಕೆರೆಯ ಅವಿನಾಶ್(30)ಮೃತ. ಬೆಂಗಳೂರು ಕೆಡೆಗೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಸ್ಥಳಕ್ಕೆ ತಿಪಟೂರು ಗ್ರಾಮಾಂತರ ಪೊಲೀಸರು ಭೇಟಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಬಂದ್: ಅಪಘಾತ ಸಂಭವಿಸಿದ ಕರಡಿ ಕೆರೆ ಕೋಡಿ ವೃತ್ತದಲ್ಲಿ ಶೆಟ್ಟಿಹಳ್ಳಿ, ಕೆ.ಬಿ.ಕ್ರಾಸ್ ಮತ್ತು ತಿಪಟೂರು ಕಡೆಗೆ ಹೋಗುವ ವೃತ್ತವನ್ನು ವೈಜ್ಞಾನಿಕವಾಗಿ ನಿರ್ಮಿಸಿರುವುದೇ ಅಪಘಾತಕ್ಕೆ ಕಾರಣವೆಂದು ಆರೋಪಿಸಿ ಸ್ಥಳಿಯರು ಬೆಳಗ್ಗೆ 9&30ರಿಂದ ಮಧ್ಯಾಹ್ನ 1&15ರ ವರೆಗೂ ರಾಷ್ಟ್ರಿಯ ಹೆದ್ದಾರಿ ಬಂದ್ ಮಾಡಿ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ನಡೆಸಿದರು. ಶಾಸಕ ಕೆ.ಷಡಕ್ಷರಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಪರಿಣಾಮ ಜಿಲ್ಲಾ ಹೆಚ್ಚುವರಿ ಪೊಲಿಸ್ ವರಿಷ್ಠಾಧಿಕಾರಿ ಅಬ್ದುಲ್ಖಾದರ್ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಕೆಎಸ್ಆರ್ಟಿಸಿ ಜಿಲ್ಲಾ ಅಧಿಕಾರಿ ತಕ್ಷಣದ ಪರಿಹಾರವಾಗಿ 50 ಸಾವಿರ ನೆರವು ೂಷಿಸಿ, ಇಲಾಖೆಯಿಂದ ಸಿಗಬಹುದಾದ ಇನ್ನಿತರ ಪರಿಹಾರ ಕೊಡಿಸುವ ಭರವಸೆ ನೀಡಿದ ನಂತರ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಯಿತು.
ತಿಪಟೂರು: ಹಳೇ ವೈಷಮ್ಯದ ಹಿನ್ನೆಲೆಯುಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಯುವಕನೋರ್ವನಿಗೆ ಬಿಯರ್ ಬಾಟಲಿಯಿಂದ ಚುಚ್ಚಿ ಹತ್ಯೆಗೈಯುವ ಪ್ರಯತ್ನ ನಡೆದಿದೆ. ಅರಸು ನಗರದ ಮುಬಾರಕ್ ಹಲ್ಲೆಗೊಳಗಾಗಿದ್ದು, ಹಾಸನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಹಲ್ಲೆಗೊಳಗಾದ ಮುಬಾರಕ್ ಪ್ರಕರಣವೊಂದರಲ್ಲಿ ಜೈಲು ಸೇರಿ ಜ.29ರಂದು ಬಿಡುಗಡೆಯಾಗಿ ಬಂದಿದ್ದ ಎನ್ನಲಾಗಿದೆ. ಗುರುವಾರ ನಗರದ ಶೇವಿಂಗ್ ಶಾಪ್ನಲ್ಲಿದ್ದಾಗ ಸಾಹಿಲ್ ಗುಂಪು ದಾಳಿ ಮಾಡಿ ಬಿಯರ್ ಬಾಟಲಿಯಿಂದ ಚುಚ್ಚಿ ಹತ್ಯೆಗೈಯುವ ಪ್ರಯತ್ನ ನಡೆಸಿದೆ. ಪ್ರಾಣಾಪಾಯದಿಂದ ಮುಬಾರಕ್ ಪಾರಾಗಿದ್ದಾರೆ. ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆ ಮುಬಾರಕ್ ಗುಂಪು ಸಾಹಿಲ್ ಸಹೋದರ ಗೋವರ್ ಮೇಲೆ ಹಲ್ಲೆ ನಡೆಸಿದ್ದೇ ನಿನ್ನೆಯ ಪ್ರತಿಕಾರಕ್ಕೆ ಕಾರಣ ಎನ್ನಲಾಗಿದೆ. ಗಾಂಧೀನಗರದಲ್ಲಿ ಎರಡು ಗುಂಪುಗಳು ಪ್ರಾಬಲ್ಯ ಸ್ಥಾಪಿಸಲು ಪೈಪೋಟಿ ನಡೆಸುತ್ತಿದ್ದು, ಆಗಾಗ್ಗೆ ಗುಂಪುಗಳ ಮದ್ಯೆ ಹೊಡದಾಟ, ಬಡಿದಾಟಗಳು ನಡೆಯುತ್ತಿವೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.