ಜಿಲ್ಲೆ

ಅಪಘಾತದಲ್ಲಿ ಪುನುಗು ಬೆಕ್ಕು ಸಾವು

ಮೈಸೂರು: ನಗರದ ಹೊರವಲಯದ ದಟ್ಟಗಳ್ಳಿ ಬಡಾವಣೆಯಲ್ಲಿ ಪುನುಗು ಬೆಕ್ಕು ವಾಹನಕ್ಕೆ ಸಿಲುಕಿ ಮೃತಪಟ್ಟಿದೆ.


ಇಲ್ಲಿನ ಜೋಡಿ ಬೇವಿನಮರದ ಬಳಿ ಶನಿವಾರ ರಾತ್ರಿ ಹೊತ್ತಿನಲ್ಲಿ ರಸ್ತೆ ದಾಟುತ್ತಿದ್ದ ಈ ಅಪರೂಪದ ಪ್ರಾಣಿ ವಾಹನದ ಚಕ್ರಕ್ಕೆ ಸಿಲುಕಿ ಬಲಿಯಾಗಿದೆ.


ಆಫ್ರಿಕ ಮತ್ತು ಏಷಿಯಾ ಖಂಡಗಳಲ್ಲಿ ಕಂಡುಬರುವ ಪುನುಗು ಬೆಕ್ಕು (ಸಿವೆಟ್ ಕ್ಯಾಟ್) ಸಂಸತಿ ಮೈಸೂರು ಭಾಗದಲ್ಲಿ ಕಡಿಮೆ. ಇಲಿ, ಹಲ್ಲಿ, ಚಿಕ್ಕ ಪಕ್ಷಿಗಳು, ಹಕ್ಕಿಗೂಡಿನ ತತ್ತಿಗಳು ಮತ್ತು ಕೀಟಗಳನ್ನು ತಿಂದು ಬದುಕುವ ಈ ಪ್ರಾಣಿ ಭೂಮಿಯ ಮೇಲೆ ವಾಸಿಸುವುದೇ ಹೆಚ್ಚು.

ಅಪರೂಪಕ್ಕೆ ಕಾಣಸಿಗುವ ಈ ಪ್ರಾಣಿ ಇತ್ತೀಚಿಗೆ ರಸ್ತೆ ಅಪಘಾತಕ್ಕೆ ತುತ್ತಾಗುತ್ತಿವೆ. ರಾತ್ರಿ ಹೊತ್ತಿನಲ್ಲಿ ರಸ್ತೆಯಲ್ಲಿ ಸಾಗುವ ವಾಹನ ಸವಾರರು ನಿಧಾನವಾಗಿ ಚಲಿಸಬೇಕು ಎಂದು ದಟ್ಟಗಳ್ಳಿಯ ನಿವಾಸಿ ಕಾರ್ತಿಕ್ ವಿನಂತಿಸಿದ್ದಾರೆ.