ಕಡೂರು ಬೈಪಾಸ್ ರಸ್ತೆಯ ಕನಕರಾಯನ ಗುಡ್ಡದ ಬಳಿ ನಡೆದ ಅಪಘಾತದಲ್ಲಿ ಕಾರು ನಜ್ಜುಗುಜ್ಜಾಗಿರುವುದು. 
ಜಿಲ್ಲೆ

ಅಪಘಾತದಲ್ಲಿ ಕಾರು ಚಾಲಕ ಸಾವು

ಕಡೂರು: ಪಟ್ಟಣದ ಹೊರ ವಲಯದ ಬೈಪಾಸ್ ರಸ್ತೆಯ ಕನಕರಾಯನ ಗುಡ್ಡದ ಬಳಿ ಲಾರಿ ಮತ್ತು ಕಾರು ಮುಖಾಮುಖಿ ಡಿಕ್ಕಿ ಹೊಡೆದುಕೊಂಡ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂವರಿಗೆ ಗಾಯಗಳಾಗಿವೆ.

ದಾವಣಗೆರೆ ಪ್ರತಾಪ್ ರಾವ್ (52) ಮೃತ ದುರ್ದೈವಿ. ಮೃತರ ಪತ್ನಿ ಸೋಫಿಯಾ, 4 ವರ್ಷದ ಮಗು ಮತ್ತು ಲಾರಿ ಚಾಲಕ ವಿಜಯ್‌ಕುಮಾರ್ ಅವರಿಗೆ ಗಾಯಗಳಾಗಿದ್ದು, ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬುಧವಾರ ಪ್ರತಾಪ್ ರಾವ್ ಕುಟುಂಬಸ್ಥರೊಂದಿಗೆ ದಾವಣಗೆರೆಯಿಂದ ಮೈಸೂರಿಗೆ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಮೂಲಕ ಹೋಗುತ್ತಿರುವಾಗ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ರಸ್ತೆ ಬದಿಯಲ್ಲಿದ್ದ ಟ್ಯಾಂಕರ್ ಲಾರಿಯನ್ನು ಕ್ರೇನ್‌ನಿಂದ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದರು. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.