ಮಾಗಡಿ: ಕುಣಿಗಲ್ನ ಉಂಗಿಬಂಡಿ ಬಳಿ ಕಾರು ಹಾಗೂ ಕ್ಯಾಂಟರ್ ನಡುವೆ ಅಪಘಾತ ಸಂಭವಿಸಿ, ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದಾರೆ. ಮಾಗಡಿ ತಾಲೂಕಿನ ಮತ್ತೀಕೆರೆ ಗ್ರಾಮದ ಪಟ್ಟಣದ ಸೀಬೇಗೌಡ (50), ಪತ್ನಿ ಶೋಭಾ (42), ಪುತ್ರ ಭಾನು ಕಿರಣ್ಗೌಡ (15), ಮಗಳು ದುಂಬಿಶ್ರೀ (19) ಮೃತರು. ಕುಣಿಗಲ್ನ ಖಾಸಗಿ ಶಾಲೆಗೆ ಭಾನು ಕಿರಣ್ ಗೌಡನನ್ನು ಬಿಡಲು ಕುಟುಂಬ ಸಮೇತರಾಗಿ ತೆರಳಿದ್ದಾಗ ಅಪಘಾತ ಸಂಭವಿಸಿದೆ. 15 ವರ್ಷದ ಹಿಂದೆ ಮಾಗಡಿ ಪಟ್ಟಣದ ನಟರಾಜ ಬಡಾವಣೆಯಲ್ಲಿ ವಾಸಿಸುತ್ತಿದ್ದರು. ಎಸ್ಪಿ ಕೆವಿ. ಅಶೋಕ್ ಇತರರು ಸ್ಥಳ ಪರಿಶೀಲಿಸಿದರು. ಕುಣಿಗಲ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.