ಬಾಣಸಮುದ್ರ ಗೇಟ್ ಸಮೀಪ ಸಾರಿಗೆ ಬಸ್‌ಗೆ ಬೈಕ್ ಸಿಲುಕಿ ನಜ್ಜುಗುಜ್ಜಾಗಿರುವುದು. 
ಜಿಲ್ಲೆ

ಅಪಘಾತದಲ್ಲಿ ಇಬ್ಬರು ಸವಾರರಿಗೆ ಗಾಯ

ಹಲಗೂರು: ಸಮೀಪದ ಬಾಣಸಮುದ್ರ ಗೇಟ್ ಬಳಿ ಶನಿವಾರ ಸ್ಕೂಟರ್‌ಗೆ ಬೈಕ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಗಾಯಗೊಂಡಿದ್ದಾರೆ.

ಸಮೀಪದ ಕುಂಟನದೊಡ್ಡಿ ನಿವಾಸಿ ಮನು ಮತ್ತು ದೊಡ್ಡ ಚೇನ್ನೀಪುರ ಗ್ರಾಮದ ಮನು ಗಾಯಗೊಂಡವರು. ಘಟನೆ ಬಳಿಕ ಗಾಯಾಳುಗಳಿಗೆ ಮಳವಳ್ಳಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ಸೇರಿಸಲಾಯಿತು.

ತೊರೆಕಾಡನಹಳ್ಳಿ ಕಡೆಯಿಂದ ಹಾಡ್ಲಿ ಸರ್ಕಲ್ ಕಡೆಗೆ ಸ್ಕೂಟರ್ ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಈ ವೇಳೆ ಹಾಡ್ಲಿ ಕಡೆಯಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಬೈಕ್ ಆಕಸ್ಮಿಕವಾಗಿ ಸಿಲುಕಿ ನಜ್ಜುಗುಜ್ಜಾಗಿದೆ.


ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾರಿಗೆ ಬಸ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.