ಜಿಲ್ಲೆ

ಅಪಘಾತ ಬೈಕ್ ಸವಾರನ ಸ್ಥಿತಿ ಗಂಭೀರ

reportermys

ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಶಿವನ ಸಮುದ್ರ ಗ್ರಾಮದ ವೆಸ್ಲಿ ಸೇತುವೆ ಸಮೀಪ ಕಾರು-ಬೈಕಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರನ ಸ್ಥಿತಿ ಗಂಭೀರವಾಗಿದೆ.

ಶಿವನ ಸಮುದ್ರ ಗ್ರಾಮದ ಮದನ್‌ಕುಮಾರ್(23)ಗಾಯಾಳು. ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ಮಸೀದಿಪುರಂನ ಸತೀಶ್ ರೆಡ್ಡಿ ಕಾರು ಚಾಲಕ. ಅಪಘಾತದಲ್ಲಿ ಗಾಯಾಳು ಮದನ್‌ಗೆ ಬಲ ತೊಡೆ ಮುರಿದಿದ್ದು ಕೈ, ಕಾಲು ಬೆರಳುಗಳಿಗೆ ಪೆಟ್ಟಾಗಿದೆ. ಈತನ ತಂದೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಾರು ಚಾಲಕ ಸತೀಶ್ ರೆಡ್ಡಿ ವಿರುದ್ಧ ದೂರು ನೀಡಿದ್ದಾರೆ. ಗಾಯಾಳನ್ನು ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.