ಜಿಲ್ಲೆ

ಅನ್ಯಾಯ ಪ್ರಶ್ನಿಸುವ ಕಾರ್ಯ ಮಾಡಿ

ತೆಲಸಂಗ: ಡಿಜಿಟಲ್ ಹಾಗೂ ಸಾಮಾಜಿಕ ಜಾಲತಾಣಗಳ ಮಧ್ಯೆಯೂ ಕಾರ್ಯ ನಿರ್ವಹಿಸುತ್ತಿರುವ ಪತ್ರಿಕೆ ಮತ್ತು ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದು ಗಡಿನಾಡು ಕನ್ನಡ ಬಳಗದ ಅಧ್ಯಕ್ಷ ಗುರುರಾಜ ಕುಂಬಾರ ಹೇಳಿದರು.

ಗ್ರಾಮದಲ್ಲಿ ಅಂತಾರಾಷ್ಟ್ರೀಯ ಪತ್ರಿಕಾ ದಿನಾಚರಣೆ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಪತ್ರಿಕಾ ವಿತರಣೆ ಕಾರ್ಯಕ್ರಮದಲ್ಲಿ  ಮಾತನಾಡಿದರು. ಸತ್ಯ ಪರಿಶೀಲಿಸಿ, ವಿಶ್ವಸನೀಯ ಮತ್ತು ನಿಖರ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಪತ್ರಿಕೆ ಮತ್ತು ಪತ್ರಕರ್ತರ ಕಾರ್ಯ ದೊಡ್ಡದಾಗಿದೆ. ಸತ್ಯ ಮತ್ತು ವಸ್ತುನಿಷ್ಠ ಮಾಹಿತಿ ಒದಗಿಸುವುದೇ ಪತ್ರಿಕೆ. ಅನ್ಯಾಯ ಪ್ರಶ್ನಿಸುವುದು ಮತ್ತು ದುರ್ಬಲರ ಪರವಾಗಿ ನಿಲ್ಲುವ ಕಾರ್ಯ ಪತ್ರಕರ್ತರು ಮಾಡಬೇಕು ಎಂದು ಸಲಹೆ ನೀಡಿದರು.

ಹಿರಿಯ ಶಿಕ್ಷಕ ಗಪೂರ ಮುಲ್ಲಾ, ಯುವ ಮುಖಂಡ ಸುನೀಲ ಪೂಜಾರಿ ಮಾತನಾಡಿದರು.

ಪತ್ರಿಕಾ ವಿತರಕ ಶ್ರೀಶೈಲ ಬಡ್ಡೂರ ಅವರನ್ನು ಸನ್ಮಾನಿಸಲಾಯಿತು. ಗ್ರಾಮ ಲೆಕ್ಕಾಧಿಕಾರಿ ಬಿ.ಜಿ.ಇರಕಾರ, ಪಂಡಿತಯ್ಯ ಮಠಪತಿ, ರವಿ ದಳವಾಯಿ ಇತರರು ಇದ್ದರು.