ಜಿಲ್ಲೆ

ಅನ್ಯ ಕೆಲಸದಿಂದ ಶಿಕ್ಷಕರನ್ನು ವಿಮುಕ್ತಿಗೊಳಿಸಿ

ಆನಂದಕುಮಾರ ಭಮ್ಮನ್ನವರ
ಅನ್ಯ ಕೆಲಸದಿಂದ ಶಿಕ್ಷಕರನ್ನು ವಿಮುಕ್ತಿಗೊಳಿಸಿ ||ಶಾಲಾ ಶಿಕ್ಷಕರ ಸಂಘದಿಂದ ಒತ್ತಾಯ ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಅನ್ಯ ಕೆಲಸಗಳಿಂದ ಮುಕ್ತಿಗೊಳಿಸಿ ಮಕ್ಕಳಿಗೆ ಪಾಠ ಮಾಡಲು ಅವಕಾಶ ಮಾಡಿಕೊಡುವಂತೆ ಆಗ್ರಹಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಿಕ್ಕೋಡಿ ಜಿಲ್ಲಾ  ಘಟಕದಿಂದ ಮಂಗಳವಾರ ಡಿಡಿಪಿಐ ಆರ್.ಎಸ್.ಸೀತಾರಾಮು ಅವರಿಗೆ ಮನವಿ ಸಲ್ಲಿಸಿದರು. ಕಳೆದ ಬೆಸಿಗೆ ರಜೆಯಲ್ಲಿ ಎಸ್‌ಸಿ ಜಾತಿ ಗಣತಿ ಕಾರ್ಯ ನಿರ್ವಹಿಸಿದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಬಿಎಲ್‌ಓಗಳನ್ನಾಗಿ ನೇಮಕಾತಿ ಮಾಡಿ ಆದೇಶ ನೀಡುತ್ತಿದ್ದು, ಕೂಡಲೇ ಬಿಎಲ್‌ಓ ಆದೇಶವನ್ನು ರದ್ದು ಪಡಿಸಬೇಕು.ಬಿಎಲ್‌ಓ ಕೆಲಸದಿಂದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಮುಕ್ತಿಗೊಳಿಸುವಂತೆ ಮನವಿ ಮಾಡಿದರು. ಪ್ರಾಥಮಿಕ ಶಾಲೆಗಳಲ್ಲಿ ಗುಮಾಸ್ತ ,ಜವಾನ ,ಮುಖ್ಯ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಆದರೂ ಶಿಕ್ಷಕರು ಉಚಿತ ಪಠ್ಯಪುಸ್ತಕ ,ಸಮವಸ್ತ್ರ  ವಿತರಣೆ ಸೇರಿದಂತೆ ಇಲಾಖೆ ಕಾರ್ಯಗಳಲ್ಲಿ  ಶಿಕ್ಷಕರನ್ನು ತೊಡಗಿಸಿರುವುದರಿಂದ ಪ್ರಾಥಮಿಕ ಶಾಲಾ ಶಿಕ್ಷಕರು ಶಾಲೆಯಲ್ಲಿ ಇದ್ದು ಮಕ್ಕಳಿಗೆ ಪಾಠ ಮಾಡಲು ಅವಕಾಶ ಸಿಗದಂತಹ ಪರಿಸ್ಥಿತಿ ಎದುರಾಗಿದೆ. ಇದು ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತಿದೆ. ಆದ್ದರಿಂದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಅನ್ಯ ಕಾರ್ಯಗಳಿಂದ ಬಿಡುಗಡೆಗೊಳಿಸುವ ಮೂಲಕ ಶಾಲೆಯಲ್ಲಿಯೇ ಇದ್ದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಶಾಲಾ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮೂಲಕ ಒತ್ತಾಯಿಸಿದ್ದಾರೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಎಂ.ಲೋಕನ್ನವರ, ಕಾರ್ಯದರ್ಶಿ ವೈ.ಎಸ್.ಬುಡ್ಡಗೋಳ, ಜಿ.ಎಂ.ಹಿರೇಮಠ, ಬಿ.ಎ.ಕುಂಬಾರ,ಎನ್.ಜಿ.ಪಾಟೀಲ, ಜಿ.ಎಂ.ಕಾಂಬಳೆ ಎಸ್.ಎನ್.ಬೆಳಗಾವಿ, ಆರ್.ಕೆ.ಕಾಂಬಳೆ, ಬಾಬುರಾವ ಚೌಗಲಾ,ಡಿ.ಆರ್.ಚಲವಾದಿ, ಶೈಲಜಾ ಜೋಶಿ,ಗಿರಿಜಾ ಗುಡಸಿ, ಎಸ್.ಎಂ.ಮಾನೆ ಇತರರಿದ್ದರು.